Mysore
26
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆಹಾರ ರೈಸ್‌ಮಿಲ್‌ನಲ್ಲಿ ಪತ್ತೆ

ಕೆ.ಆರ್‌.ಪೇಟೆ: ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿದ ಆಹಾರದ ದಾಸ್ತಾನು ರೈಸ್‌ಮಿಲ್‌ನಲ್ಲಿ ಪತ್ತೆಯಾಗಿದೆ.

ಮಾರ್ಚ್.‌17ರಂದು ರೈತ ಮುಖಂಡರು ರೈಸ್‌ಮಿಲ್‌ನಲ್ಲಿ ತೌಡು ತರಲು ಹೋದಾಗ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.

ತಕ್ಷಣವೇ ರೈತರು, ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಕರೆ ಮಾಡಿ ತಿಳಿಸಿದಾಗ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಶಿರಸ್ತೆದಾರ್‌ ಈ ಬಗ್ಗೆ ವಿಚಾರಣೆ ನಡೆಸಿದಾಗ ಗವಿಮಠ ವಸತಿ ಶಾಲೆಗೆ ಸೇರಿದ ಆಹಾರ ದಾಸ್ತಾನು ಎಂಬುದು ಖಚಿತವಾಗಿದೆ.

ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಸಂಬಂಧಪಟ್ಟವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

Tags:
error: Content is protected !!