Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ನ್ಯಾಟೋ ದೇಶಗಳಿಗೆ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ ದೇಶಗಳು ಈಗ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಪಶ್ಚಿಮ ಏಷ್ಯಾದ ಸಂಘರ್ಷ ಪರಿಣಾಮ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಟ್ರಂಪ್ ನ್ಯಾಟೋ ದೇಶಗಳ ಸಹಾಯ ಕೋರಿದ್ದರು. ಆದರೆ ನ್ಯಾಟೋ ರಾಷ್ಟ್ರಗಳು ಖಡಾಖಂಡಿತವಾಗಿ ನಿರಾಕರಿಸಿವೆ. ನ್ಯಾಟೋಗೆ ಈ ಯುದ್ಧಕ್ಕೂ ಸಂಬಂಧವಿಲ್ಲ ಎಂದು ಜರ್ಮನಿ ಹೇಳಿದೆ. ನಾವು ಈ ಯುದ್ಧದಲ್ಲಿ ಪಾಲುದಾರರಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಸ್ಪಷ್ಟಪಡಿಸಿದ್ದಾರೆ. ನಮ್ಮದು ಕೇವಲ ರಕ್ಷಣಾತ್ಮಕ ನಿಲುವು ಎಂದು ಯುಕೆ ಪ್ರಧಾನಿ ಸ್ಟಾರ್ಮರ್ ಹೇಳಿದ್ದಾರೆ. ಇನ್ನು ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ ಎಂದು ಕೆನಡಾ ಧಾನಿ ಮಾರ್ಕ್ ಕಾರ್ನಿ ಖಾರವಾಗಿಯೇ ಹೇಳಿದ್ದಾರೆ.

ನ್ಯಾಟೋ ನಿಲುವಿನಿಂದ ಕೆರಳಿರುವ ಟ್ರಂಪ್, ಇದು ನ್ಯಾಟೋ ಮಾಡುತ್ತಿರುವ ಮೂರ್ಖತನದ ತಪ್ಪು. ನಮಗೆ ಯಾರ ಸಹಾಯವೂ ಬೇಕಿಲ್ಲ, ನಮ್ಮ ಶಕ್ತಿಯೇ ನಮಗೆ ಸಾಕು ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಏಕಾಂಗಿಯಾಗಿಯಾದರೂ ಹಾರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.

ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡದ ಚೀನಾದ ಮೇಲೆ ಟ್ರಂಪ್ ಅಸಮಾಧಾನಗೊಂಡಿದ್ದು, ಈ ಕಾರಣಕ್ಕೆ ಮಾರ್ಚ್ 31 ರಿಂದ ನಿಗದಿಯಾಗಿದ್ದ ತಮ್ಮ ಚೀನಾ ಪ್ರವಾಸವನ್ನು ಐದು ವಾರಗಳ ಕಾಲ ಮುಂದೂಡಿದ್ದಾರೆ.

ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋಸೆಫ್ ಕೆಂಟ್ ತೀವ್ರ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಟ್ರಂಪ್ ಅವರ ‘ಮೇಕ್ ಅಮೆರಿಕಾ ಗ್ರೇಟ್ ಅಗೈನ್’ ಬೆಂಬಲಿಗರಲ್ಲೇ ಒಡಕು ಮೂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

 

Tags:
error: Content is protected !!