Mysore
22
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ನೆತನ್ಯಾಹು ಬದುಕಿದ್ದಾರೆ, ಹತ್ಯೆ ವದಂತಿ ಸುಳ್ಳು ; ಇಸ್ರೇಲ್‌

ಜೆರುಸಲೆಮ್‌ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಇರಾನ್‌ ಹೇಳಿಕೆಯನ್ನು ಇಸ್ರೇಲ್‌ ಕಚೇರಿ ಅಲ್ಲೆಗಳಿದಿದೆ.

ಇಸ್ರೇಲ್‌ ದಾಳಿ ಬೆನ್ನಲ್ಲೇ ಇರಾನ್‌ ಸಹ ದಾಳಿಯನ್ನು ಮುಂದುವರೆಸಿದೆ. ಏತನ್ಮಧ್ಯೆ, ನೆತನ್ಯಾಹು ಹತ್ಯೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ದೃಶ್ಯವೊಂದು ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‌ ಕಚೇರಿ, ಇದೆಲ್ಲ ಸುಳ್ಳು ಸುದ್ದಿ, ಪ್ರಧಾನಿ ನೆತನ್ಯಾಹು ಅವರು ಕ್ಷೇಮವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಸಂಘರ್ಷ ಕುರಿತು ನೆತನ್ಯಾಹು ವಿಡಿಯೊಂದನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು. ವಿಡಿಯೋ ಆರಂಭಧಲ್ಲಿ ನೆತನ್ಯಾಹು ಅವರ ಬಲಗೈಯಲ್ಲಿ ಆರು ಬೆರಳು ಕಾಣುತ್ತಿವೆ ಎಂದು ಕೆಲವರು ಪೋಸ್ಟ್‌ ಮಾಡಿದರೆ, ಇದು ಎಐ ಮೂಲಕ ಸೃಜಿಸಿರಬಹುದಾದ ವಿಡಿಯೊ ಎಂದು ಇನ್ನಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು.

ಸಾಕಷ್ಟು ನೆಟ್ಟಿಗರು ನೆತನ್ಯಾಹು ವಿಡಿಯೊದಲ್ಲಿ ಇಸ್ರೇಲ್‌ ಧ್ವಜಗಳು ಸ್ಥಿರವಾಗಿದೆ. ಪರದೆ ಗಾಳಿಗೆ ಅಲುಗಾಡುತ್ತಿದೆ. ಇದು ಎಐ ಸುಳ್ಳು ಸುದ್ದಿ ಎಂದಿದ್ದಾರೆ. ಆದಾಗ್ಯೂ ಹಲವರು ಖಮೇನಿ ಹತ್ಯೆಗೆ ಪ್ರತೀಕಾರವಾಗಿ ನೆತನ್ಯಾಹು ಅನ್ನು ಹತ್ಯೆ ಮಾಡಲಾಗಿದೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ಹೀಗಾಗಿ ನೇತನ್ಯಾಹು ಸಾವಿನ ವದಂತಿ ಹರಿದಾಡುತ್ತಿದೆ.

Tags:
error: Content is protected !!