Mysore
29
clear sky

Social Media

ಶುಕ್ರವಾರ, 13 ಮಾರ್ಚ್ 2026
Light
Dark

ಸಫಾರಿಗೆ ಮೊಬೈಲ್‌ ನಿಷೇಧ ; ಪ್ರವಾಸಿಗರ ಬೇಸರ

ವನ್ಯಜೀವಿ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಅವಕಾಶ ಇಲ್ಲದೆ ಪರಿತಾಪ; ನಿಷೇಧಕ್ಕೆ ಕೆಲವರ ಸಹಮತ

• ಚಿರಂಜೀವಿ ಸಿ. ಹುಲ್ಲಹಳ್ಳಿ

ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸ್ಥಗಿತ ಗೊಂಡಿದ್ದ ಸಫಾರಿ ಇತ್ತೀಚೆಗಷ್ಟೇ ಪುನಾರಂಭವಾಗಿದೆ. ಖುಷಿ ಯಿಂದಸಫಾರಿಗೆ ಹೊರಡುವ ಪ್ರವಾಸಿಗರಿಗೆ ವನ್ಯಜೀವಿಗಳು ಕಾಣಿಸಿಕೊಂಡರೆ ಅರೆರೆ. . . ಒಂದು ಫೋಟೊ ತೆಗೆದು ಕೊಳ್ಳೋಣ ಎಂದು ಮೊಬೈಲ್ ಫೋನ್‌ಗಾಗಿ ಜೇಬನ್ನು ತಡಕಾಡಿದರೆ ಕೈಗೆ ಸಿಗದು! ಏಕೆಂದರೆ ಸಫಾರಿಗೆ ಫೋನ್ ತೆಗೆದು ಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಕಬಿನಿ-ಬಂಡೀಪುರದ ವ್ಯಾಪ್ತಿಯಲ್ಲಿ ಸಫಾರಿಗಾಗಿ ತೆರಳು ವವರು ಮೊಬೈಲ್ ಬಳಕೆ ನಿಷೇಧ ದಿಂದ ನಿರಾಸೆಗೆ ಒಳಗಾಗುತ್ತಿದ್ದಾರೆ.

ವನ್ಯಜೀವಿಗಳು ಸ್ವಚ್ಛಂದವಾಗಿ ಕಾಡಿ ನಲ್ಲಿ ವಿಹರಿಸುವ ಪರಿಯನ್ನು ಕಣ್ಣುಂಬಿ ಕೊಳ್ಳುತ್ತಾ, ಆನಂದಿಸುತ್ತಿ ದ್ದಾರೆ. ಹುಲಿ, ಕರಡಿ, ಅರಣ್ಯ ಆನೆ, ಜಿಂಕೆ, ಚಿರತೆ, ಕಾಡು ಎಮ್ಮೆ ಸೇರಿದಂತೆ ಕಿಂಗ್‌ ಫಿಷರ್ ನಂತಹ ಅಪರೂಪದ ಪಕ್ಷಿಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಇವುಗಳನ್ನು ಕಣ್ಣುಂಬಿಕೊಂಡು ಆ ಖುಷಿ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿರಾಸೆ ತರಿಸಿದೆ.

ಹೊಸ ನಿಯಮಗಳನ್ನು ಅರಣ್ಯ ಇಲಾಖೆ ಜಾರಿಗೊಳಿ ಸಿರುವುದು, ಅದರಲ್ಲಿಯೂ ಮೊಬೈಲ್ ನಿಷೇಧ ಪ್ರವಾಸಿ ಗರಿಗೆ ಬೇಸರ ತಂದಿದೆ. ಈ ಮೊದಲು ಸಫಾರಿಗೆ ತೆರಳಿದ ಸಾಮಾನ್ಯರು ತಮ್ಮ ಮೊಬೈಲ್‌ಗಳಲ್ಲಿ ವನ್ಯಜೀವಿಗಳ ಆಟೋಟ ಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್‌ ಸ್ಟೇಟಸ್‌ ಗಳಲ್ಲಿ ಹಾಕಿಕೊಂಡುಖುಷಿಪಡುತ್ತಿದ್ದರು. ಇದೊಂದು ರೀತಿ ಹಣವಿಲ್ಲದೆ ಸಫಾರಿಯ ಬಗ್ಗೆ ಪರೋಕ್ಷವಾಗಿ ಪ್ರಚಾರ ಮಾಡುವ ವಿಧಾನವಾಗಿತ್ತು. ಆದರೆ, ಈಗ ಹೊಸ ನಿಯಮದನ್ವಯ ಮೊಬೈಲ್‌ನ್ನು ನಿಷೇಧಿಸಿರುವುದು ಈ ಸಂಭ್ರಮವನ್ನು ಕಸಿದಿದೆ. ಪ್ರಾಣಿ ಪಕ್ಷಿಗಳನ್ನು ಕಣ್ಣುಂಬಿಕೊಂಡವರು ಅದನ್ನು ಮೆಲುಕು ಹಾಕುವ ಪರಿಗೆ ಬ್ರೇಕ್ ಹಾಕಲಾಗಿದೆ.

ಸಫಾರಿ ವಾಹನ ಅಥವಾ ಜೀಪು ಹತ್ತುವ ಮುನ್ನವೇ ಪ್ರವಾಸಿಗರು ಮೊಬೈಲ್‌ಗಳನ್ನು ಕೇಂದ್ರದ ವಶಕ್ಕೆ ಒಪ್ಪಿಸಬೇಕು. ಇಲ್ಲವಾದರೆ ತಮ್ಮ ವಾಹನಗಳಲ್ಲಿ ಇಟ್ಟು ಬರಬೇಕು. ಬಸ್ ಮತ್ತು ಜೀಪು ಏರಿದ ನಂತರ ಅರಣ್ಯ ಇಲಾಖೆ ನಿಯೋಜಿಸಿರುವ ಮಾರ್ಗದರ್ಶಕರು, ಚಾಲಕರು, ಯಾರಾದರೂ ಮೊಬೈಲ್ ಫೋನ್ ಇಟ್ಟುಕೊಂಡಿದ್ದರೆ ಕೊಟ್ಟು ಬಿಡಿ. ಮೊಬೈಲ್ ಫೋನ್ ಮೂಲಕ ಪ್ರಾಣಿ ಮತ್ತು ಕಾಡಿನ ಪ್ರದೇಶವನ್ನು ವಿಡಿಯೋ ಫೋಟೊ ತೆಗೆ ಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಚಿತ್ರಿಸಿರುವುದು ಕಂಡು ಮೊಬೈಲ್‌ಗಳನ್ನು ಸೀಜ್ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಇದರಿಂದ ಪ್ರವಾಸಿಗರು ಸಫಾರಿ ಆರಂಭದಲ್ಲೇ ನಿರಾಸೆಗೊಳಗಾಗುತ್ತಾರೆ. ನಾವು ಸಫಾರಿಯ ಖುಷಿಯನ್ನು ಅನುಭವಿಸಬೇಡವೇ? ಅದರ ನೆನಪನ್ನು ಉಳಿಸಿಕೊಳ್ಳಬೇಡವೇ? ಸಫಾರಿ ವೇಳೆ ಮೊಬೈಲ್ ನಿಷೇಧಿಸಿದರೆ ನಾವು ಸಫಾರಿಯ ಖುಷಿಯ ಕ್ಷಣವನ್ನು ನೆನಪಿನ ಬುತ್ತಿಯಲ್ಲಿ ಇರಿಸಿಕೊಳ್ಳುವುದಾದರೂ ಹೇಗೆ? ಎನ್ನುತ್ತಾರೆ ಪ್ರವಾಸಿಗರು.

ಕ್ಯಾಮೆರಾ ಕೊಂಡೊಯ್ಯಲು ಅವಕಾಶ: ಮೊಬೈಲ್ ಫೋನ್‌ಗಳನ್ನು ನಿಷೇಧಿಸಿರುವ ಅರಣ್ಯ ಇಲಾಖೆ ಎಂದಿನಂತೆ ಕ್ಯಾಮೆರಾಗಳಿಗೆ ಅವಕಾಶವನ್ನು ಮುಂದುವರಿಸಿದೆ. ಏಕೆಂ ದರೆ ಸಫಾರಿಗೆ ತೆಗೆದುಕೊಂಡು ಹೋಗುವ ಕ್ಯಾಮೆರಾಗಳಿಗೆ ಶುಲ್ಕ ನಿಗದಿಗೊಳಿಸಲಾಗಿದೆ. ಇದು ಸಾಮಾನ್ಯ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ವಿದೇಶಿಗರು, ರಾಜ್ಯದ ಮೂಲೆ ಮೂಲೆಗಳಿಂದ ಸಫಾರಿಗೆ ಬರುವ ಅನೇಕರು ಕ್ಯಾಮೆರಾ ಗಳನ್ನು ಹೊಂದಿರುವುದಿಲ್ಲ. ಅವರು ತಮ್ಮ ಮೊಬೈಲ್ ಗಳಲ್ಲಿಯೇ ಕಾಡಿನ ಸೌಂದರ್ಯವನ್ನು ಸೆರೆಹಿಡಿದು ರೀಲ್ಸ್ ಮೂಲಕ ಹಂಚುತ್ತಿದ್ದರು. ಇದಕ್ಕೂ ಈಗ ಕಡಿವಾಣ ಬಿದ್ದಿದೆ.

ನಿರ್ಬಂಧ ಸರಿ ಇದೆ. ಈ ಬಗ್ಗೆ ಕೆಲವರು ಬೇಸರ ಹೊರ ಹಾಕಿದರೆ, ಇನ್ನೂ ಹಲವು ಮಂದಿ ಮೊಬೈಲ್ ನಿಷೇಧ ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ. ಸಫಾರಿ ವೇಳೆ ಕೆಲವು ಪ್ರವಾಸಿಗರು ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಇದರಿಂದ ಗದ್ದಲ ಉಂಟಾಗುತ್ತದೆ. ಸಫಾರಿಯನ್ನು ನಿಶ್ಯಬ್ದದಿಂದ ವೀಕ್ಷಿಸಬೇಕು. ಹಾಗಾಗಿ ನಿಯಮ ಮುಂದುವರಿಯಲಿ. ಕಿತ್ತುಕೊಂಡಂತಾಗಿದೆ. -ದರ್ಶನ್ ಕುಮಾರ್, ವನ್ಯಜೀವಿ ಛಾಯಾಗ್ರಾಹಕ

ಲಕ್ಷಾಂತರ ರೂ. ಪಾವತಿಸಿ ಕ್ಯಾಮೆರಾವನ್ನು ಖರೀದಿಸುವ ಸಾಮರ್ಥ್ಯ ನಮ್ಮಂತಹವರಿಗಿಲ್ಲ. ನಾವು ಮೊಬೈಲ್ ಫೋನ್ ಗಳಲ್ಲಿ ಫೋಟೊ – ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದೆವು. ಮೊಬೈಲ್‌ ನಿಷೇಧಿಸಿರುವುದು ನಮ್ಮ ಸಂತೋಷವನ್ನು ಕಿತ್ತುಕೊಂಡಾಂತಾಗಿದೆ – ಮಧು, ಸಫಾರಿ ಪ್ರಿಯ

ದೇಶದ ಬಹುತೇಕ ಭಾಗಗಳಲ್ಲಿ ಸಫಾರಿ ವೇಳೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಏಕೆಂದರೆ ಇದು ಸಫಾರಿ ವಾಹನದ ಚಾಲಕರಿಗೆ ಕಿರಿಕಿರಿ ತಂದೊಡ್ಡುತ್ತದೆ. ಸಾರ್ವಜನಿಕರು ಸಫಾರಿ ಬಸ್-ಜೀಪಿನಲ್ಲಿ ಕುಳಿತು ಪ್ರಾಣಿಗಳ ಕಾಣುವಂತೆ ಸೆಲ್ವಿ ತೆಗೆದುಕೊಳ್ಳಲು ವಾಹನಗಳನ್ನು ಹೆಚ್ಚು ಸಮಯ ನಿಲ್ಲಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ಮೊಬೈಲ್ ಬಳಕೆಯಿಂದ ಇತರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ. -ಪ್ರಭಾಕರನ್, ಡಿಸಿಎಫ್, ಬಂಡೀಪುರ

 

 

Tags:
error: Content is protected !!