Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಟಿ.20 ವಿಶ್ವಕಪ್‌ | ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ; 82.1 ಕೋಟಿ ಮಂದಿ ವೀಕ್ಷಣೆ

ಅಹ್ಮದಾಬಾದ್ : ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20 ವಿಶ್ವಕಪ್ ಫೈನಲ್ ಪಂದ್ಯ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಈ ಪಂದ್ಯವನ್ನು ಕೋಟ್ಯಂತರ ಜನರು ವೀಕ್ಷಿಸಿರುವುದು ದಾಖಲೆಯಾಗಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಜಿಯೋಹಾಟ್ ಸ್ಟಾರ್‌ನಲ್ಲಿ ಬರೊಬ್ಬರಿ 82.1 ಕೋಟಿ ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಪಂದ್ಯವನ್ನು ಇಷ್ಟು ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡಿದ ಮೊದಲ ಪಂದ್ಯ ಎಂಬ ಕೀರ್ತಿಗೆ ಭಾಜನವಾಗಿದೆ.

ವೀಕ್ಷಣೆ ವಿವರ
ಫೈನಲ್ ಆರಂಭದ ಮೊದಲು ಗಾಯಕ ರಿಕಿ ಮಾರ್ಟಿನ್ ಪ್ರದರ್ಶನ ನೀಡಿದರು. ಟಾಸ್ ಸಮಯದಲ್ಲಿ 2.1 ಕೋಟಿ ಮತ್ತು 4.2 ಕೋಟಿ ವೀಕ್ಷಕರು ನೇರ ಪ್ರಸಾರ ವೀಕ್ಷಿಸಿದರೆ, ಭಾರತ ಬ್ಯಾಟಿಂಗ್ ಪ್ರಾರಂಭಿಸಿದಾಗ ವೀಕ್ಷಕರ ಸಂಖ್ಯೆ 6.5 ಕೋಟಿ ತಲುಪಿತು.

ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದ್ದಂತೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಭಾರತದ ಬ್ಯಾಟಿಂಗ್ ಅಂತ್ಯದಲ್ಲಿ 43.9 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಇನಿಂಗ್ಸ್ ವಿರಾಮದ ಸಮಯದಲ್ಲಿ 44.3 ಕೋಟಿಗೆ ಏರಿತ್ತು. ನ್ಯೂಜಿಲೆಂಡ್ ತಂಡವನ್ನು ಬೆನ್ನಟ್ಟುವ ಮೊದಲು ಭಾರತ 255 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ವೇಳೆ ವೀಕ್ಷಕರ ಸಂಖ್ಯೆ 49.9 ಕೋಟಿಯಾಗಿತ್ತು. ಮೊದಲ ಓವರ್ ಅಂತ್ಯದ ವೇಳೆಗೆ ಅದು 50.3 ಕೋಟಿಗೆ ಏರಿತ್ತು ಎಂದು ಜಿಯೋ ಹಾಟ್ ಸ್ಟಾರ್ ಮೂಲಗಳು ತಿಳಿಸಿವೆ.

Tags:
error: Content is protected !!