Mysore
32
few clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ ವಿಚಾರ: ಸಚಿವ ಪರಮೇಶ್ವರ್‌ ರಿಯಾಕ್ಷನ್‌

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಪರಮೇಶ್ವರ್‌ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಿಲ್ಲ. ಕೈಗಾರಿಕಾ ವಿಚಾರವಾಗಿ ಚರ್ಚಿಸಲು ಭೇಟಿ ಮಾಡಿದ್ದೆ ಅಷ್ಟೇ ಎಂದು ಹೇಳಿದರು.

ಈ ಹಿಂದೆ ನಾವು ಒಟ್ಟಾಗಿ ಸರ್ಕಾರ ನಡೆಸಿದವರು. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇ ತಪ್ಪು ಅನ್ನೋದು ಸರಿಯಲ್ಲ. ನಮ್ಮ ಸಿದ್ಧಾಂತ ನಮಗೆ, ಅವರ ಸಿದ್ಧಾಂತ ಅವರಿಗೆ. ರಾಜಕೀಯ ವಿಚಾರವಾಗಿ ನಾವು ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

Tags:
error: Content is protected !!