Mysore
24
broken clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಓದುಗರ ಪತ್ರ: ಇಷ್ಟೊಂದು ಸಿಗ್ನಲ್ ಲೈಟ್‌ಗಳು ಅಗತ್ಯವೇ?

ಮೈಸೂರಿನ ಬಹುತೇಕ ಎಲ್ಲ ವೃತ್ತಗಳಲ್ಲೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ಸಿಗ್ನಲ್ ಲೈಟ್‌ಗಳ ನಗರಿಯಾಗಿ ಮಾರ್ಪಾಡಾಗಿದೆ.

ಸಂಚಾರ ದಟ್ಟಣೆ ತೀವ್ರವಾಗಿರುವ ಸ್ಥಳಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿರುವುದು ಸ್ವಗತಾರ್ಹ, ಆದರೆ ಕೆಲವೇ ವಾಹನಗಳು ಸಂಚರಿಸುವ ಸ್ಥಳಗಳಲ್ಲೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿರುವುದರಿಂದ ಆಂಬ್ಯುಲೆನ್ಸ್, ಅಗ್ನಿಶಾಮಕದಳ ಮೊದಲಾದ ತುರ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸಿ ಅವಶ್ಯಕತೆ ಇಲ್ಲದ ಕಡೆ ಸಿಗ್ನಲ್ ಲೈಟ್‌ಗಳನ್ನು ತೆರವುಗೊಳಿಸಿ. ವೃತ್ತಗಳ ಬಳಿ ನಿಧಾನವಾಗಿ ತೆರಳಲು ಬ್ಯಾರಿಕೇಡ್‌ಗಳನ್ನು ಅಳವಡಿಸುವುದು ಅಗತ್ಯ.

-ಚಂದ್ರೇಗೌಡ, ತೊಣಚಿಕೊಪ್ಪಲು, ಮೈಸೂರು

Tags:
error: Content is protected !!