Mysore
29
scattered clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದಾ?: ಯತೀಂದ್ರ ಸಿದ್ದರಾಮಯ್ಯಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ತಿರುಗೇಟು

Mahadevappa doesn't even have the courtesy to talk about etiquette: Pratap Simha

ಮೈಸೂರು: ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡಲ್ಲ ಎಂಬ ಎಂಎಲ್‌ಸಿ ಹಾಗೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದಾ?. ವರ್ಗಾವಣೆ ಲಿಸ್ಟ್ ಕೊಟ್ಟು ಅಪ್ಪ ಅಪ್ಪ ನಾ ಕೊಟ್ಟಿರೋದು ಅಷ್ಟೆ ಮಾಡಿ ಅನ್ನೋದು ಮಾತ್ರ ಕೆಲಸನಾ?. ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡೋದೆ ಕೆಲಸನಾ?. ನೀವು ಜಸ್ಟ್ ಎಂಎಲ್ಸಿ. ನೀವು ಯಾವ ಕೆಪಾಸಿಟಿ ಮೇಲೆ ವರ್ಗಾವಣೆ ಮಾಡಿಸುತ್ತೀರಾ?. ಯತೀಂದ್ರ ಅವರೇ ನಿಮ್ಮಂಥ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ. ವರ್ಗಾವಣೆ ದಂಧೆ ಕೆಲಸ ನಿಮಗೆ ಇರಲಿ. ನಿಮ್ಮ ಅಪ್ಪನೂ ನಾಲ್ಕು ಬಾರಿ ಚುನಾವಣೆಯಲ್ಲಿ ಸೋತಿದ್ದರು. ಆಗ ಅವರನ್ನು ಕೆಲಸ ಇಲ್ಲದವರು ಅಂತೀದ್ರಾ? ನಂಗೆ ಟಿಕೆಟ್ ತಪ್ಪಿದೆ ಅಷ್ಟೆ. ಅಸೆಂಬ್ಲಿಗೆ ಮೈಸೂರಿನಿಂದಲೇ ಗೆದ್ದು ಬರ್ತಿನಿ. ಅವತ್ತು ನೀವು ಎಲ್ಲಿ ಇರುತ್ತೀರಾ ನೋಡ್ತಿನಿ. ಹಿಂಬಾಗಿಲಿನಿಂದ ನಿಮ್ಮ ರೀತಿ ಅಸೆಂಬ್ಲಿಗೆ ಬರುವ ಜಾಯಮಾನ ನನ್ನದ್ದಲ್ಲ. ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಅಂತಾ ಇರದೇ ಇದ್ದಿದ್ದರೆ ನಿಮ್ಮನ್ನು ಯಾವ ಎಕ್ಕಣ್ಣ, ಸೀನಣ್ಣನೂ ಕ್ಯಾರೆ ಅಂತೀರಲ್ಲ. ಅಪ್ಪನ ಹೆಸರಿಂದ ಅಸ್ತಿತ್ವಕ್ಕೆ ಉಳಿಸಿ ಕೊಂಡ ನೀವು ನಂಗೆ ಪಾಠ ಹೇಳಬೇಡಿ. ನಿಮ್ಮ ಅಪ್ಪ ಅರಾಮಾಗಿ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತಿರುವ ರಸ್ರೆ ಮಾಡಿಸಿದ್ದು ಈ‌ ಪ್ರತಾಪ್ ಸಿಂಹ ಅನ್ನೋದು ನೆನಪಿರಲಿ. ನಿಮ್ಮ ಅಪ್ಪ ಮೈಸೂರಿಗೆ ಒಂದು ಈ ರೀತಿಯ ರೋಡ್ ಮಾಡಿಸಿದ್ದಾರಾ ಹೇಳಿ ಎಂದು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

 

Tags:
error: Content is protected !!