Mysore
23
overcast clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಹಲವು ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ ದಿಢೀರ್‌ ರದ್ದು?

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ. ಸದ್ಯ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಯ ವಿಚಾರ. ಶಾಸಕರು ಸರ್ಕಾರಿ ಖರ್ಚಿನಲ್ಲಿ ವಿದೇಶಕ್ಕೆ ಹೊರಟಿದ್ದಾರೆಯೇ? ಅಥವಾ ಖಾಸಗಿ ಪ್ರವಾಸವೇ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಈ ಬಗ್ಗೆ ವಿವಾದವಾಗುತ್ತಿದ್ದಂತೆಯೇ ಹಲವು ಶಾಸಕರ ವಿದೇಶ ಪ್ರವಾಸ ರದ್ದುಗೊಂಡಿದೆ.

30 ಶಾಸಕರು ಇಂದು ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರವಾಸ ಹೊರಡಬೇಕಿತ್ತು. ರಾತ್ರಿ 8 ಗಂಟೆಗೆ ಎಲ್ಲಾ ಶಾಸಕರು ವಿಮಾನ ನಿಲ್ದಾಣದಲ್ಲಿ ಸೇರುವ ಯೋಜನೆ ಇದೆ. ಆದರೆ ಸದ್ಯದ ಮಾಹಿತಿ ಪ್ರಕಾರ 24 ಶಾಸಕರು ಮಾತ್ರ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಹಲವು ಶಾಸಕರು ವಿದೇಶ ಪ್ರವಾಸ ಕ್ಯಾನ್ಸಲ್‌ ಆಗುತ್ತಿದೆ. ಅಂತಿಮವಾಗಿ ಎಷ್ಟು ಜನ ಪ್ರವಾಸ ಹೋಗಲಿದ್ದಾರೆ ಎಂಬುದು ಇನ್ನೂ ಸಹ ಖಚಿತವಾಗಿಲ್ಲ.

 

 

 

Tags:
error: Content is protected !!