Mysore
31
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಕೆನಡಾದಲ್ಲಿ ಹತ್ಯೆಯಾಗಿದ್ದ ಐಟಿ ಉದ್ಯೋಗಿ ಚಂದನ್‌ ಮೃತದೇಹ ಸ್ವಗ್ರಾಮಕ್ಕೆ

ಬೆಂಗಳೂರು: ಕೆನಡಾದಲ್ಲಿ ಐಟಿ ಉದ್ಯೋಗಿ ಚಂದನ್‌ ಕುಮಾರ್‌ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸ್ವಗ್ರಾಮ ತ್ಯಾಮಗೊಂಡ್ಲುಗೆ ಚಂದನ್‌ ಮೃತದೇಹ ತಲುಪಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುಗೆ ಚಂದನ್‌ ಮೃತದೇಹ ತಲುಪಿದ್ದು, ಮನೆಯ ಬಳಿ ಅಂತಿಮ ವಿಧಿ ವಿಧಾನದ ನಂತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತ್ಯಾಮಗೊಂಡ್ಲುವಿನ ಗ್ರಾಮೀಣ ಬ್ಯಾಂಕ್‌ ಸಮೀಪ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಆರ್ಯವೈಶ್ಯ ಸಂಘದ ಸ್ಮಶಾನದಲ್ಲಿ ಚಂದನ್‌ ಕುಮಾರ್‌ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

Tags:
error: Content is protected !!