Mysore
24
broken clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್:‌ ಗಣಿಗ ರವಿಕುಮಾರ್‌ ವ್ಯಂಗ್ಯ

ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್.‌ ನಮಗೆ ಹೈಕಮಾಂಡ್‌ ನೋಟಿಸ್‌ ಕೊಡಬಹುದು. ಆದರೆ ಹೈಕಮಾಂಡ್‌ಗೆ ನಾವು ನೋಟಿಸ್‌ ಕೊಡಲು ಸಾಧ್ಯವಿಲ್ಲ ಎಂದು ಶಾಸಕ ಗಣಿಗ ರವಿಕುಮಾರ್‌ ವ್ಯಂಗ್ಯವಾಡಿದ್ದಾರೆ.

ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ನಮ್ಮ ಹೈಕಮಾಂಡ್‌ ಎಂದು ಡಿಕೆಶಿ ಹೇಳಿದ್ದಾರೆ. ನಾನೂ ಅದನ್ನೇ ಪುನರ್‌ ಉಚ್ಚರಿಸುತ್ತೇನೆ. ಅವರು ನಮ್ಮ ಹೈಕಮಾಂಡ್‌ ಅನ್ನೋದನ್ನು 100 ಪರ್ಸೆಂಟ್‌ ಒಪ್ಪಿಕೊಳ್ಳುತ್ತೀವಿ. ಯಾರೂ ಸ್ಟೇಟ್‌ಮೆಂಟ್‌ ಕೊಡಬೇಡಿ ಅಂತಾ ನಾಲ್ಕು ಬಾರಿ ಹೇಳಿದರು. ಆದರೂ ಸ್ಟೇಟ್‌ಮೆಂಟ್‌ ಕೊಡುತ್ತಿದ್ದಾರೆ ಅಂದ್ರೆ ಅವರು ಸುಪ್ರೀಂ. ಖರ್ಗೆಯವರಿಗಿಂತ ಜಾಸ್ತಿ, ಡಿಕೆ ಅವರಿಗಿಂತ ಕಡಿಮೆ ಅಂತಾ ಹೇಳೋದಕ್ಕೆ ಆಗಲ್ಲ. ಮಾತನಾಡಬೇಡಿ ಅಂದರೂ ಮಾತನಾಡುತ್ತಿದ್ದಾರೆ ಅಂದ್ರೆ ಫವರ್‌ ಫುಲ್‌ ಎಂದು ಯತೀಂದ್ರ ವಿರುದ್ಧ ಕಿಡಿಕಾರಿದರು.

 

Tags:
error: Content is protected !!