Mysore
24
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ ಮ್ಯಾಚ್‌ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ: ಗೃಹ ಸಚಿವ ಪರಮೇಶ್ವರ್‌

g parameshwara pahalgam attack

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಮ್ಯಾಚ್‌ ಆಡಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಇಂದು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾ.ಕುನ್ಹಾ ವರದಿ ಅಂಶಗಳ ಬಗ್ಗೆ ಕ್ರಮಕ್ಕೆ ಸೂಚನೆ ನೀಡಿದ್ದವು. ಇಂದಿನ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲಾ ಜವಾಬ್ದಾರಿ ಆರ್‌ಸಿಬಿ ಕೆಎಸ್‌ಸಿಎ ಅವರದ್ದೇ ಆಗಿದೆ ಎಂದು ಹೇಳಿದರು.

ಐಪಿಎಲ್‌ ಆರಂಭವಾಗುತ್ತಿದೆ. ಈ ಹಿಂದೆ ಆರ್‌ಸಿಬಿ ಟ್ರೋಫಿ ಗೆದ್ದಿದೆ. ಹೋಂ ಗ್ರೌಂಡ್‌ ಉದ್ಘಾಟನೆ ಪಂದ್ಯವಾಡಲು ಕೇಳಿದರು. ನನ್ನ ನೇತೃತ್ವದಲ್ಲಿ ಎಲ್ಲಾ ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಕ್ಯಾಬಿನೆಟ್‌ಗೆ ತಿಳಿಸುತ್ತೇವೆ. ಸಂಪುಟ ಸಭೆಯು ಮುಂದಿನ ತೀರ್ಮಾನ ಮಾಡುತ್ತದೆ. ಸಂಪುಟ ತೀರ್ಮಾನ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್‌ ಆಡಿಸುವ ಬಗ್ಗೆ ಪ್ರಕಟಿಸುತ್ತೇವೆ ಎಂದು ಪರಮೇಶ್ವರ್‌ ತಿಳಿಸಿದರು.

 

Tags:
error: Content is protected !!