Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ನಾಳೆ ಎರಡೂವರೆ ಗಂಟೆ ಪ್ರವಾಸಿಗರಿಗಿಲ್ಲ ತಾಜ್‌ ಮಹಲ್‌ ಪ್ರವೇಶ: ಕಾರಣ ಏನ್‌ ಗೊತ್ತಾ.?

ಉತ್ತರ ಪ್ರದೇಶ: ಫೆಬ್ರವರಿ.10ರಂದು ಎರಡೂವರೆ ಗಂಟೆಗಳ ಕಾಲ ಪ್ರವಾಸಿಗರಿಗೆ ತಾಜ್‌ಮಹಲ್‌ ಪ್ರವೇಶ ನಿಷೇಧಿಸಲಾಗಿದೆ.

ಭಾರತೀಯ ಪುರಾತತ್ವ ಸಮೀಕ್ಷೆ ಪ್ರಕಾರ ಸೀಶೆಲ್ಸ್‌ ದೇಶದ ಅಧ್ಯಕ್ಷ ಡಾ.ಪ್ಯಾಟ್ರಿಕ್‌ ಹರ್ಮಿನಿ ಅವರು ಪತ್ನಿ ವೆರೋನಿಕ್‌ ಹರ್ಮಿನಿ ಅವರೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡುತ್ತಿದ್ದಾರೆ.

ಹಾಗಾಗಿ ಆ ದಿನ ಬೆಳಿಗ್ಗೆ 9ರಿಂದ 11.30ರವರೆಗೆ ಸಾಮಾನ್ಯ ಪ್ರವಾಸಿಗರಿಗೆ ತಾಜ್‌ಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮಂಗಳವಾರ ಹಾಗೂ ಬುಧವಾರ ಆಗ್ರಾ ಅಂತರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ರಾಜಮನೆತನದ ಆತಿಥ್ಯಕ್ಕೆ ಕೇಂದ್ರವಾಗಲಿದೆ.

ನಾಳೆ ಹಾಗೂ ನಾಡಿದ್ದು, ಆಗ್ರಾಕ್ಕೆ ವಿವಿಐಪಿಗಳು ಆಗಮಿಸುತ್ತಿದ್ದಾರೆ. ಅತಿಥಿಗಳಿಗೆ ಭದ್ರತೆ, ಸಾರಿಗೆ ಮತ್ತು ಸ್ವಾಗತ ವ್ಯವಸ್ಥೆಗಳ ಕುರಿತು ಚರ್ಚಿಸಲು ಸಂಬಂಧಿತ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ.

ವಿವಿಐಪಿ ಭೇಟಿಯ ಸಮಯದಲ್ಲಿ ಭದ್ರತಾ ಕಾರಣಗಳಿಂದಾಗಿ ತಾಜ್‌ಮಹಲ್‌ಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

 

Tags:
error: Content is protected !!