Mysore
30
scattered clouds

Social Media

ಶನಿವಾರ, 04 ಏಪ್ರಿಲ 2026
Light
Dark

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪತ್ನಿ, ಪುತ್ರನಿಗೆ ಎಸ್‌ಐಟಿ ಬುಲಾವ್‌

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡವು ಪತ್ನಿ ಹಾಗೂ ಮಗನನ್ನು ವಿಚಾರಣೆಗೆ ಒಳಪಡಿಸುತ್ತಿದೆ.

ಪತ್ನಿ ಹಾಗೂ ಪುತ್ರ ರೋಹಿತ್‌ಗೆ ಎಸ್‌ಐಟಿ ಬುಲಾವ್‌ ನೀಡಿದ್ದು, ಡೈರಿಯಲ್ಲಿ ಸಿಕ್ಕ ಬಗ್ಗೆ ಮಾಹಿತಿ ಪಡೆಯಲು ಎಸ್‌ಐಟಿ ವಿಚಾರಣೆಗೆ ಕರೆದಿದೆ. ರೈರಿ ಬರೆದಿದ್ದು ರಾಯ್‌ ಅವರೇನಾ ಎಂಬುದನ್ನು ಖಚಿತಪಡಿಸಲು ರಾಯ್‌ ಅವರ ಬೇರೆ ಬರವಣಿಗೆಯನ್ನು ಜೊತೆಗೆ ತರಲು ಸೂಚನೆ ನೀಡಲಾಗಿದೆ.

ಸಿ.ಜೆ.ರಾಯ್‌ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಕೆಲವು ಪ್ರಭಾವಿಗಳ ಹೆಸರುಗಳಿವೆಯೇ ಮತ್ತು ಆ ಪತ್ರಕ್ಕೂ ಇವರ ಸಾವಿಗೂ ಏನು ಸಂಬಂಧ ಎಂಬ ಬಗ್ಗೆ ಕುಟುಂಬಸ್ಥರಿಂದ ಎಸ್‌ಐಟಿ ವಿವರಣೆ ಪಡೆಯುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ರಾಯ್‌ ಅವರ ಪತ್ನಿ ಹಾಗೂ ಮಗನಿಗೂ ಎಸ್‌ಐಟಿ ಬುಲಾವ್‌ ನೀಡಿದೆ.

Tags:
error: Content is protected !!