Mysore
22
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಮೈಸೂರು| ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಮಾಜಿ ಸಚಿವ ಸಿ.ಟಿ.ರವಿ

ಮೈಸೂರು: ಮಾಜಿ ಸಚಿವ ಸಿ.ಟಿ.ರವಿ ಅವರಿಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಕಾಲಿಗೆ ನಮಸ್ಕರಿಸುತ್ತಾ ಪಿಎಚ್‌ಡಿ ಸ್ವೀಕರಿಸಿದ ಮಾಜಿ ಸಚಿವ ಸಿ.ಟಿ.ರವಿ ಅವರು, ನಾನು ರಾಜಕೀಯದಲ್ಲಿ ಇರುವುದರಿಂದ ರಾಜ್ಯಶಾಸ್ತ್ರವನ್ನೇ ಆಯ್ಕೆ ಮಾಡಿಕೊಂಡೆ. ರಾಜಕೀಯದಲ್ಲಿ ಯಾವಾಗಲು ಬ್ಯುಸಿ ಆಗಿರುವ ನನಗೆ ನೀವೇಕೆ ಪಿಎಚ್‌ಡಿ ಮಾಡಬಾರದು ಎಂದು ಕೆಲವರು ಸಲಹೆ ನೀಡಿದರು. ಕಳೆದ 2023ರಲ್ಲಿ ಪಿಎಚ್‌ಡಿ ಸಂಪೂರ್ಣಗೊಳಿಸಿದೆ. ರಾಜ್ಯಶಾಸ್ತ್ರದ ಡಾ.ಸುರೇಶ ಅವರ ಮಾರ್ಗದರ್ಶನದಲ್ಲಿ 4 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದೆ. ನಾನು ನಿರಂತರ ಕಲಿಕೆಯ ವಿದ್ಯಾರ್ಥಿ. ಪ್ರತಿ ಕ್ಷಣಕ್ಕೂ ತಿಳಿದುಕೊಳ್ಳುವುದು ಇರುತ್ತದೆ. ಎಲ್ಲರೊಟ್ಟಿಗೆ ಕುಳಿತು ಕಲಿಕೆಯ ಒಂದು ಭಾಗವಾದೆ ಎಂದು ಸಂತಸ ವ್ಯಕ್ತಪಡಿಸಿದರು.

Tags:
error: Content is protected !!