Mysore
29
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಶಿಡ್ಲಘಟ್ಟ ಕೇಸ್‌ನಲ್ಲಿ ಕಾನೂನಿನಂತೆ ಕ್ರಮ: ಸಚಿವ ಭೈರತಿ ಸುರೇಶ್‌

ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ ಎಂದು ಸಚಿವ ಭೈರತಿ ಸುರೇಶ್‌ ಹೇಳಿದರು.

ಈ ಕುರಿತು ವಿಧಾನಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಸದಸ್ಯೆ ಭಾರತ ಶೆಟ್ಟಿ ಅವರು, ಪೌರಾಡಳಿತ ಇಲಾಖೆಯಲ್ಲಿ ಬ್ಯಾನರ್‌ ಹಾಕಲು ನಿಯಮ ಇದೆ. ಅನುಮತಿ ಪಡೆದು ಹಾಕಬಹುದು ಅಂತಿದೆ. ಶಿಡ್ಲಘಟ್ಟದಲ್ಲಿ ರಾಜೀವ್‌ ಗೌಡ ಅನ್ನೋರು ಮಹಿಳಾ ಅಧಿಕಾರಿಯನ್ನು ನಿಂದಿಸಿದ್ದಾರೆ. ಫೋನ್‌ನಲ್ಲಿ ಕೆಟ್ಟದಾಗಿ ಮಾತಾಡಿದ್ದಾರೆ. ಆ ಅಧಿಕಾರಿ ಕಣ್ಣೀರು ಹಾಕಿದ್ದಾರೆ. ಪೌರಾಡಳಿತ ಇಲಾಖೆಯಿಂದ ರಾಜೀವ್‌ ಗೌಡ ಮೇಲೆ ಕೇಸ್‌ ಹಾಕಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್‌ ಅವರು, ಈ ಘಟನೆ ಆದ ಕೂಡಲೇ ಎಸ್ಪಿಗೆ ಸೂಚನೆ ನೀಡಲಾಗಿದೆ. ಆಕೆಯೇ ದೂರು ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ಕ್ರಮ ಆಗಿದೆ. ರಾಜೀವ್‌ ಗೌಡನನ್ನು ಬಂಧನ ಮಾಡಲಾಗಿದೆ. ಆತನನ್ನು ಹೊರರಾಜ್ಯದಲ್ಲಿ ಅರೆಸ್ಟ್‌ ಮಾಡಲಾಗಿದೆ. ಕಾನೂನು ಅಡಿಯಲ್ಲಿ ಎಲ್ಲಾ ಸೆಕ್ಷನ್‌ ಹಾಕಲಾಗಿದೆ. ಪಕ್ಷಾತೀತವಾಗಿ ಶಿಕ್ಷೆ ಕೊಡುತ್ತೇವೆ. ಯಾರನ್ನೂ ರಕ್ಷಣೆ ಮಾಡಲ್ಲ. ಕಾನೂನು ಕ್ರಮ ಆಗುತ್ತದೆ ಎಂದು ಹೇಳಿದರು.

 

Tags:
error: Content is protected !!