Mysore
25
clear sky

Social Media

ಗುರುವಾರ, 29 ಜನವರಿ 2026
Light
Dark

ಮೂವರು ಕನ್ನಡಿಗರು ಸೇರಿದಂತೆ 45 ಮಂದಿಗೆ ಪದ್ಮಶ್ರೀ ಗೌರವ

ಮೂವರು ಕನ್ನಡಿಗರಿವರು ; ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ

ಬೆಂಗಳೂರು : ದೇಶದ ಅತ್ಯುನ್ನತ ನಾಗರೀಕ ಗೌರವವಾದ ಪದ್ಮ ಪ್ರಶಸ್ತಿಗೆ ಮೂವರು ಕನ್ನಡಿಗರು ಆಯ್ಕೆಯಾಗಿದ್ದಾರೆ. ಪುಸ್ತಕಗಳೇ ತಮ್ಮ ಪ್ರಪಂಚ ಎಂದುಕೊಂಡು ಲಕ್ಷಾಂತರ ಪುಸ್ತಕ ಸಂಗ್ರಹಿಸಿದ ಮಂಡ್ಯದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಮತ್ತು ಬೆಂಗಳೂರಿನ ಎಸ್.ಜಿ. ಸುಶೀಲಮ್ಮ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 45 ಮಂದಿಯನ್ನು ಗುರುತಿಸಲಾಗಿದೆ.

ಈ ವರ್ಷದ ಪದ್ಮ ಪ್ರಶಸ್ತಿಗಳು ಭಾರತದ ಉದ್ದಗಲಕ್ಕೂ ಇರುವ ವಿವಿಧ ರೀತಿಯ ಪ್ರಚಾರವಿಲ್ಲದ ವೀರರನ್ನು ಗುರುತಿಸಿವೆ. ಇವರಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳು, ಪ್ರಾಚೀನ ಬುಡಕಟ್ಟು ಜನಾಂಗದವರು ಮತ್ತು ದೂರದ ಮತ್ತು ಕಷ್ಟಕರ ಪ್ರದೇಶಗಳಿಂದ ಬಂದವರು ಸೇರಿದ್ದಾರೆ. ಆರೋಗ್ಯ ರಕ್ಷಣೆ, ಶಿಕ್ಷಣ, ಜೀವನೋಪಾಯ, ನೈರ್ಮಲ್ಯ, ಸುಸ್ಥಿರತೆ ಇತ್ಯಾದಿಗಳನ್ನು ಉತ್ತೇಜಿಸುವಲ್ಲಿ ಕೆಲಸ ಮಾಡುವ ದಿವ್ಯಾಂಗರು, ಮಹಿಳೆಯರು, ಮಕ್ಕಳು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರು ಇದ್ದಾರೆ ಎನ್ನಲಾಗಿದೆ.

ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ ‘ಪುಸ್ತಕದ ಮನೆ’ಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ.ಅಂಕೇಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿದ್ದಾರೆ. ತಮ್ಮ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟು, ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನೂ ಮಾರಿದ ಅಂಕೇಗೌಡರು, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಸ್ಛೂರ್ತಿಯಾಗಿದ್ದಾರೆ. ಉದ್ಯಮಿ ಹರಿ ಕೋಡೆ ಅವರು ನಿರ್ಮಿಸಿಕೊಟ್ಟಿರುವ ಈ ಪುಸ್ತಕದ ಮನೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ.

ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್
ಎಂ. ಅಂಕೇಗೌಡರು ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಜನಿಸಿದರು. ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಸೇರಿ, ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಬಳಿಕ, ಅಂಚೆ ಮತ್ತು ತೆರಪಿನ ಮೂಲಕ ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ದುಡಿಯುತ್ತಿದ್ದಾಗ, ತಮ್ಮ ಸಂಬಳದ ಹೆಚ್ಚಿನ ಹಣವನ್ನು ಪುಸ್ತಕ ಕೊಳ್ಳುವುದಕ್ಕೇ ಬಳಸುತ್ತಿದ್ದರು. ಪುಸ್ತಕಗಳ ಸಂಗ್ರಹಕ್ಕಾಗಿ ತಮ್ಮ ನಿವೇಶನವನ್ನೂ ಮಾರಾಟ ಮಾಡಿದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್
ಅಂಕೇ ಗೌಡರ ಈ ಅಪರೂಪದ ಪುಸ್ತಕ ಸಂಗ್ರಹಕ್ಕೆ ನೆರವಾಗಲು, ಉದ್ಯಮಿ ಹರಿ ಕೋಡೆ ಅವರು ಪಾಂಡವಪುರದ ವಿಶ್ವೇಶ್ವರನಗರ ಬಡಾವಣೆಯಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ’ಪುಸ್ತಕದ ಮನೆ’ ಈಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ದಾಖಲಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ, ಅದರಲ್ಲೂ ಪುಸ್ತಕ ಪ್ರಿಯರಿಗೆ ಒಂದು ದೊಡ್ಡ ಕೊಡುಗೆಯಾಗಿದೆ.

ಪುಸ್ತಕ ಪ್ರೀತಿಗೆ ಕಾರಣ ಶಾಲಾ ದಿನಗಳು!
ಅಂಕೇ ಗೌಡರ ಈ ಅಪಾರ ಪುಸ್ತಕ ಪ್ರೀತಿಗೆ ಕಾರಣವಾದದ್ದು ಅವರ ಶಾಲಾ ದಿನಗಳು. ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯಲು ಅನುಮತಿ ಸಿಗದಿದ್ದಾಗ, ಅಂಕೇಗೌಡರು ಸ್ವತಃ ಪುಸ್ತಕಗಳನ್ನು ಸಂಗ್ರಹಿಸಲು ಮತ್ತು ಖರೀದಿಸಲು ಮುಂದಾದರು. ಈ ಚಿಕ್ಕ ಆಲೋಚನೆಯೇ ಇಂದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯಗಳಲ್ಲಿ ಒಂದಾಗಿ ಬೆಳೆದಿದೆ. ಹರಳಹಳ್ಳಿಯಲ್ಲಿರುವ ಈ ಪುಸ್ತಕದ ಮನೆ, ಲಕ್ಷಾಂತರ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ. ಇಲ್ಲಿಗೆ ಬರುವ ಯಾರಾದರೂ ಯಾವುದೇ ವಿಷಯದ ಪುಸ್ತಕಗಳನ್ನು ನೋಡಬಹುದು ಮತ್ತು ಓದಬಹುದು. ಪ್ರಪಂಚದ ಪ್ರಮುಖ ಗ್ರಂಥಗಳೂ ಇಲ್ಲಿ ಲಭ್ಯವಿವೆ.

45 ಮಂದಿಯ ಸಂಪೂರ್ಣ ಪಟ್ಟಿ

ಅಂಕೇಗೌಡ – ಕರ್ನಾಟಕ
ಅರ್ಮಿಡಾ ಫರ್ನಾಂಡಿಸ್ – ಮಹಾರಾಷ್ಟ್ರ
ಭಗವಾನ್‌ದಾಸ್ ರೈಕ್ವಾರ್ – ಮಧ್ಯಪ್ರದೇಶ
ಭಿಕ್ಲ್ಯಾ ಲಡಕ್ಯಾ ಧೀಂಡಾ – ಮಹಾರಾಷ್ಟ್ರ
ಬ್ರಿಜ್ ಲಾಲ್ ಭಟ್ – ಜಮ್ಮು ಮತ್ತು ಕಾಶ್ಮೀರ
ಬುಧೀ ಟಾಟಿ – ಛತ್ತೀಸ್‌ಗಢ
ಚರಣ್ ಹೆಂಬ್ರಮ್ – ಪಶ್ಚಿಮ ಬಂಗಾಳ
ಚಿರಂಜಿ ಲಾಲ್ ಯಾದವ್ – ಛತ್ತೀಸ್‌ಗಢ
ಧಾರ್ಮಿಕ್ ಲಾಲ್ ಚುನಿಲಾಲ್ ಪಾಂಡ್ಯ – ಗುಜರಾತ್
ಗಫ್ರುದ್ದೀನ್ ಮೇವಾಟಿ ಜೋಗಿ – ಹರಿಯಾಣ
ಹ್ಯಾಲಿ ವಾರ್ – ಮೇಘಾಲಯ
ಇಂದರ್‌ಜಿತ್ ಸಿಂಗ್ ಸಿಧು – ಪಂಜಾಬ್
ಕೆ. ಪಜನಿವೇಲ್ – ಪುದುಚೇರಿ
ಕೈಲಾಶ್ ಚಂದ್ರ ಪಂತ್ – ಉತ್ತರಾಖಂಡ
ಖೇಮ್ ರಾಜ್ ಸುಂದ್ರಿಯಾಲ್ – ಉತ್ತರಾಖಂಡ
ಕೊಲ್ಲಕ್ಕಾಯಿಲ್ ದೇವಕಿ ಅಮ್ಮ ಜಿ – ಕೇರಳ
ಕುಮಾರಸಾಮಿ ತಂಗರಾಜ್ – ತೆಲಂಗಾಣ
ಮಹೇಂದ್ರ ಕುಮಾರ್ ಮಿಶ್ರಾ – ಒಡಿಶಾ
ಮಿರ್ ಹಾಜಿಭಾಯಿ ಕಸಂಭಾಯಿ – ಗುಜರಾತ್
ಮೋಹನ್ ನಾಗರ್ – ಉತ್ತರ ಪ್ರದೇಶ
ನರೇಶ್ ಚಂದ್ರ ದೇವ್ ವರ್ಮಾ – ತ್ರಿಪುರ
ನೀಲೇಶ್ ವಿನೋದ್‌ಚಂದ್ರ ಮಾಂಡ್ಲೆವಾಲಾ – ಗುಜರಾತ್
ನೂರುದ್ದೀನ್ ಅಹ್ಮದ್ – ಅಸ್ಸಾಂ
ಓದುವಾರ್ ತಿರುತಣಿ ಸ್ವಾಮಿನಾಥನ್ – ತಮಿಳುನಾಡು
ಪದ್ಮಾ ಗುರ್ಮೇಟ್ – ಲಡಾಖ್
ಪೋಖಿಲಾ ಲೆಕ್ತೆಪಿ – ಅಸ್ಸಾಂ
ಪುಣ್ಯಮೂರ್ತಿ ನಟೇಸನ್ – ತಮಿಳುನಾಡು
ಆರ್. ಕೃಷ್ಣನ್ – ತಮಿಳುನಾಡು
ರಘುಪತ್ ಸಿಂಗ್ – ರಾಜಸ್ಥಾನ
ರಘುವೀರ್ ತುಕಾರಾಮ್ ಖೇಡ್ಕರ್ – ಮಹಾರಾಷ್ಟ್ರ
ರಾಜಸ್ಥಪತಿ ಕಾಳಿಯಪ್ಪ ಗೌಂಡರ್ – ತಮಿಳುನಾಡು
ರಾಮ ರೆಡ್ಡಿ ಮಾಮಿಡಿ – ತೆಲಂಗಾಣ
ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ – ಮಹಾರಾಷ್ಟ್ರ
ಎಸ್. ಜಿ. ಸುಶೀಲಮ್ಮ – ಕರ್ನಾಟಕ
ಸಾಂಗ್ಯುಸಾಂಗ್ ಎಸ್. ಪೊಂಗೆನರ್ – ನಾಗಾಲ್ಯಾಂಡ್
ಶಫಿ ಶೌಕ್ – ಜಮ್ಮು ಮತ್ತು ಕಾಶ್ಮೀರ
ಶ್ರೀರಂಗ್ ದೇವಬಾ ಲಾಡ್ – ಮಹಾರಾಷ್ಟ್ರ
ಶ್ಯಾಮ್ ಸುಂದರ್ – ಬಿಹಾರ
ಸಿಮಾಂಚಲ ಪಾತ್ರೋ – ಒಡಿಶಾ
ಸುರೇಶ್ ಹನಗವಾಡಿ – ಕರ್ನಾಟಕ
ಟಗಾ ರಾಮ್ ಭೀಲ್ – ರಾಜಸ್ಥಾನ
ಟೆಚಿ ಗುಬಿನ್ – ಅರುಣಾಚಲ ಪ್ರದೇಶ
ತಿರುವಾರೂರ್ ಭಕ್ತವತ್ಸಲಂ – ತಮಿಳುನಾಡು
ವಿಶ್ವ ಬಂಧು – ಪಂಜಾಬ್
ಯುಮ್ನಮ್ ಜಾತ್ರಾ ಸಿಂಗ್ – ಮಣಿಪುರ

 

 

 

Tags:
error: Content is protected !!