ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಾಗಿದೆ.
ಪರೀಕ್ಷೆಯ ಕೊಠಡಿಯಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ಮತ್ತೊಂದು ಪರೀಕ್ಷೆ ಬರುವವರೆಗೂ ಕಾಯಬೇಕಾಗಿದೆ. ಆದ್ದರಿಂದ ಇದೇ ತರಹ ಪರೀಕ್ಷೆ ಎದುರಿಸುವ ಸಮಯಗಳಲ್ಲಿ ಅಸ್ವಸ್ಥರಾಗುವ ಪರೀಕ್ಷಾರ್ಥಿಗಳಿಗೆ ಸ್ವಲ್ಪ ಸಮಯ ಆರೋಗ್ಯ ಸುಧಾರಣೆಗೆ ಅವಕಾಶ ಕಲ್ಪಿಸಿ ಅಥವಾ ಬದಲಿಯಾಗಿ ಮತ್ತೊಂದು ದಿನ ಪರೀಕ್ಷೆಗೆ ಸಂಬಂಧಪಟ್ಟವರು ಸಮ್ಮುಖದಲ್ಲಿ ಮರುಪರೀಕ್ಷೆ ಬರೆಯಲು ಸಮಯಾವಕಾಶ ಕಲ್ಪಿಸಲು ರಾಜ್ಯ, ಕೇಂದ್ರ ಸರ್ಕಾರಗಳ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು



