Mysore
20
broken clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಓದುಗರ ಪತ್ರ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ತೊಡಗಿಸಿರುವ ಹಣವನ್ನು ಅವಧಿ ಪೂರ್ಣವಾದ ನಂತರ ಹಿಂಪಡೆಯುವ ಯಾವುದೇ ರೀತಿಯ ಚಲನ್‌ಗಳು ಕನ್ನಡದಲ್ಲಿ ದೊರೆಯುವುದಿಲ್ಲ.

ಇದರಿಂದ ಇಂಗ್ಲಿಷ್ ಬಾರದವರು ಚಲನ್ ತುಂಬಲು ಅನ್ಯರನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಚಲನ್‌ನ ಒಂದು ಭಾಗದಲ್ಲಿ ಇಂಗ್ಲಿಷ್ ಹಾಗೂ ಮತ್ತೊಂದು ಭಾಗದಲ್ಲಿ ಹಿಂದಿಯಲ್ಲಿ ಮಾತ್ರ ಮುದ್ರಿತವಾಗಿರುತ್ತವೆ. ನೆರೆಯ ರಾಜ್ಯ ತಮಿಳುನಾಡಿನಲ್ಲಿ ಒಂದು ಭಾಗದಲ್ಲಿ ಇಂಗ್ಲಿಷ್ ಹಾಗೂ ಇನ್ನೊಂದು ಕಡೆ ತಮಿಳು ಭಾಷೆಯಲ್ಲಿ ಚಲನ್ ಮುದ್ರಣವಾಗಿರುತ್ತದೆ. ಆದರೆ ನಮ್ಮ ಕರ್ನಾಟಕದ ಅಂಚೆ ಕಚೇರಿಗಳಲ್ಲಿ ಕನ್ನಡದಲ್ಲಿ ಚಲನ್ ಮುದ್ರಣವಾಗದಿರುವ ಬಗ್ಗೆ ಸ್ಥಳೀಯ ಅಂಚೆ ಕಚೇರಿಗಳ ಸಿಬ್ಬಂದಿಯನ್ನು ಕೇಳಿದರೆ ನೀವು ನಮ್ಮ ಮೇಲಧಿಕಾರಿಗಳಿಗೆ ದೂರು ನೀಡಿ ಎನ್ನುತ್ತಾರೆ. ಮೇಲಧಿಕಾರಿಗಳಿಗೆ ಕೇಳಿದರೆ ಅವರು, ನೀವು ದೆಹಲಿಯಲ್ಲಿರುವ ಪ್ರಧಾನ ಕಚೇರಿಯನ್ನು ಕೇಳಿ ಎನ್ನುತ್ತಾರೆ. ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲೂ ಕನ್ನಡದಲ್ಲೂ ಚಲನ್ ಮುದ್ರಣವಾಗುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು.

– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

 

Tags:
error: Content is protected !!