Mysore
26
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ… ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ ಮುಂಚೆಯೇ ಹೋಗಬೇಕು. ಹಾಗಾಗಿ ನೀನು ಹೊತ್ತಿಗೆ ಮುಂಚೆಯೇ ನನ್ನನ್ನು ಎದ್ದೇಳಿಸಬೇಕು. ಬಾವುಟ ಏರಿಸಿದ ಮೇಲೆ ಶಾಲೆಗೆ ರಜೆ ಕೋಳಿಗೆ ಮಜೆ.

ಚಾಕಲೇಟು ಚಾಕಲೇಟು ಕೊಡುತ್ತಾರೆ. ಅಂತ ನಿನ್ನ ಎಲ್ಲಾ ಅದೆಷ್ಟು ಬಾರಿ ಹೇಳಿದೆಯೋ ಏನೋ ! ಐದು ಗಂಟೆ ಆಯ್ತು ಎದ್ದೇಳು,ಎದ್ದೇಳು ನನ್ನಪ್ಪನೇ ಎದ್ದೇಳು.‘ ಹೀಗೆ ರಜೆ, ಚಾಕುಲೇಟಿನ ಮಾತುಗಳು ಅವ್ವನ ಬಾಯಿಂದ ಬಂದದ್ದೇ ತಡ. ದಡಬೋಡನೆ ಎದ್ದು ನಿತ್ಯ ಕರ್ಮಗಳನ್ನು ತೀರಿಸುತ್ತಿದ್ದೆವೋ ಏನೋ? ಕಣ್ಣನ್ನು ಉಜ್ಜುತ್ತಲೇ,ಆಕಳಿಸುತ್ತಲೇ ಮೂರೇ ಮೂರು ನೀರಲ್ಲಿ ಮುಖವನ್ನು ಸೀಟಿಕೊಂಡು ಚಂಗು ಚಂಗನೆ ಇಸ್ಕೂಲಿನ ಹಾದಿಯನ್ನು ಹಿಡಿದರೆ ಮುಗೀತು. ಅವ್ವ ಅಷ್ಟು ಹೊತ್ತಿಗೇ ಎದ್ದು ಒಲೆ ಒಟ್ಟಿ ಇದ್ದ ಬದ್ದ ತಂಗಳನ್ನು ಬಿಸಿ ಮಾಡಿ ತುತ್ತು ಹಾಕಲು ಕರೆದರೂ ಅದನ್ನು ಕೇಳಿಸಿಕೊಳ್ಳುವ ದೊಡ್ಡಸ್ತಿಕೆ ತಾನೇ ನಮಗೆ ಎಲ್ಲಿಂದ ಬರುತ್ತಿತ್ತು?

ಇನ್ನು ಇಸ್ಕೂಲಿಗೆ ಹೋದೇವೆಂದರೆ – ತಲೆಯ ಮೇಲೆಯೇ ಬಣ್ಣ ಬಣ್ಣದ ದಾಳ. ಅಲ್ಲಲ್ಲಿ ಸೊಕ್ಕು ನೀರಿಟ್ಟು ಮಣ್ಣನ್ನು ಘಮಗರೆಸಿ ಗುಡಿಸುವ ಅಕ್ಕ- ಅಣ್ಣಂದಿರು. ವೈಟ್ ಅಂಡ್ ವೈಟ್ ಹಾಕಿಕೊಂಡು ಹದಿನಾರು ಸಾರಿ ಒಳಗೊಳಗೇ ಲೆಕ್ಕ ಹಾಕಿ ಧ್ವಜಸ್ತಂಭಕ್ಕೆ ಬಾವುಟ ಕಟ್ಟುತ್ತಾ ನಿಂತ ಪೀಟಿ ಮೇಷ್ಟರು. ಎಲ್ಲ ಶಾಲೆಗಳಲ್ಲೂ ಒಬ್ಬೊಬ್ಬ ಇರುವಂತೆ ಧ್ವಜ ಸ್ತಂಭವನ್ನು ಬೇಕು ಬೇಕಂತಲೇ ಎಲ್ಲರೂ ನೋಡಲಿ ಎಂದೇ ಚಕಚಕ ಅಂತ ಹತ್ತು ಸಾರಿ ಹತ್ತಿ – ಇಳಿದು ಪೀಟಿ ಮೇಷ್ಟರ ಆಜ್ಞೆಯನ್ನು ಪಾಲಿಸುವ ಗುಂಡ. ಅಪರೂಪಕ್ಕೆ ಎಣ್ಣೆ ಹಾಕಿ ಕರಾಪು ತೆಗೆದ ಗಂಡು ತಲೆಗಳು. ಎರಡೆರಡು ಜಡೆ ಹೆಣೆದು ರಿಬ್ಬನ್ ಬಿಗಿದ ಹೆಣ್ಣುಗಳು. ಗಡಿಬಿಡಿಯಲ್ಲಿ ಎಡತಾಕುವ ಸೆಂಟು ಘಮಲಿನ ಶಿಕ್ಷಕರು. ಅತಿಥಿಗಳ ಮಾತುಕತೆಯಲ್ಲಿ ಮುಳುಗುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರು. ಉದ್ದುದ್ದ ಭಾಷಣಗಳು.

ಕಾಲ ಬದಲಾದಂತೆ ಹಬ್ಬದ ಆಚರಣೆಗಳು ವರ್ಷದಿಂದ ವರ್ಷಕ್ಕೆ ಆಡಳಿತದಿಂದ ಆಡಳಿತಕ್ಕೆ ಬದಲಾಗುತ್ತಾ ಹೋಗುತ್ತಿವೆ, ಮಾರ್ಪಾಟುಗಳಾಗುತ್ತಿವೆ. ಆಚರಣೆಗಳು ಬದಲಾದರೂ ಹಬ್ಬದ ನೈಜ ಇತಿಹಾಸಗಳು ಮಾತ್ರ ಬದಲಾಗಬಾರದು. ಬಿದ್ದು ತಮ್ಮ ಮೂಗಿನ ನೇರಕ್ಕೆ ಜಾತಿ, ಮತ, ಜನಾಂಗ, ಧರ್ಮ, ಭೌಗೋಳಿಕತೆಯ ಪ್ರತಿಷ್ಠೆಗೆ ಅನುಗುಣ ವಾಗಿ ಇತಿಹಾಸವನ್ನು ತಿರುಚುವುದಿದೆಯಲ್ಲಾ, ಸತ್ಯವೇ ದಂಗಾಗುವಂತೆ ಸತ್ಯದ ಮುಂದೆ ಸುಳ್ಳನ್ನು ಎತ್ತಿಕಟ್ಟು ವುದಿದೆ ಯಲ್ಲಾ, ವೈಭವೀಕರಿಸುವುದಿದೆ ಯಲ್ಲಾ ಅದು ನಿಜಕ್ಕೂ ಮಹಾಘಾತಕತನ.

ದಿಲೀಪ್ ಎನ್ಕೆ, ಯುವ ಕಥೆಗಾರ ಮತ್ತು ಅಧ್ಯಾಪಕ, ಕೊಳ್ಳೇಗಾಲ

Tags:
error: Content is protected !!