ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ ತೀರ್ಮಾನ ಕೈಗೊಂಡಿರುವುದು ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಲ್ಲಿ ಸಂತಸ ತಂದಿದೆ.
ಹಲವಾರು ಪದವಿಗಳನ್ನು ಪಡೆದುಕೊಂಡರೂ ಕೆಲವೊಮ್ಮೆ ಅರ್ಹತಾ ಪರೀಕ್ಷೆಯಲ್ಲಿ ಅನ್ನುತ್ತೀರ್ಣಗೊಂಡು ನಿರಾಸೆಗೆ ಒಳಗಾಗುತ್ತಿದ್ದರು. ವಯೋಮಿತಿ ಮೀರಿದಾಗ ಸರ್ಕಾರಿ ಕೆಲಸದ ನಿರೀಕ್ಷೆ ಯಲ್ಲಿದ್ದವರು ಅವಕಾಶ ಕೈಮೀರಿತು ಎಂಬ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದರು. ಯಾವುದೇ ಕೌಶಲವಿದ್ದರೂ ಸಾಲಕ್ಕೆ ಹೆದರಿ ಸ್ವಯಂ ಉದ್ಯೋಗ ಕೈಗೊಳ್ಳಲು ಹಿಂಜರಿಯುವವರೂ ಇದ್ದಾರೆ. ಇದೀಗ ರಾಜ್ಯ ಸರ್ಕಾರ ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ನೀಡಿದೆ. ತಮ್ಮ ಪ್ರಯತ್ನದಿಂದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಹೆಣ್ಣು ಮಕ್ಕಳಿಗೂ ಈ ಯೋಜನೆ ತುಂಬಾ ಅನುಕೂಲಕರವಾಗಿದೆ. ಸ್ವಾವಲಂಬನೆ ಮತ್ತು ಕುಟುಂಬಕ್ಕೆ ಸಹಕಾರ ನೀಡಲು ಉತ್ತೇಜನ ನೀಡಿದಂತಾಗಿದೆ.
– ಎಂ. ಎಸ್. ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು





