ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ.
ಪೊಲೀಸ್ ಸಮವಸ್ತ್ರ ಎನ್ನುವುದು ಕೇವಲ ಸರ್ಕಾರ ನೀಡುವ ಬಟ್ಟೆಯಲ್ಲ, ಅದು ರಾಜ್ಯದ ಸಾರ್ವಭೌಮತೆ, ಕಾನೂನಿನ ಶಕ್ತಿ ಮತ್ತು ಸಾರ್ವಜನಿಕ ನಂಬಿಕೆಯ ಅತ್ಯುನ್ನತ ಸಂಕೇತ. ಸಮಾಜದ ರಕ್ಷಕನೇ ತನ್ನ ಘನತೆಯನ್ನು ಮರೆತು ನೈತಿಕ ಅಧಃಪತನಕ್ಕೆ ಕಾರಣರಾದರೆ ಇಡೀ ವ್ಯವಸ್ಥೆ ಎಷ್ಟು ದುರ್ಬಲಗೊಳ್ಳುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಇದು ಶಿಸ್ತು, ಘನತೆ ಮತ್ತು ಗೌರವಕ್ಕೆ ಹೆಸರಾದ ಪೊಲೀಸ್ ಪಡೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹದ್ದು. ಇಂತಹ ದುರ್ನಡತೆಯ ಸಂಗತಿಗಳು ಮತ್ತೊಮ್ಮೆ ಪುನರಾವರ್ತನೆಯಾಗದಂತೆ ತಡೆಯುವುದು ಕೇವಲ ಶಿಕ್ಷೆಯಿಂದ ಮಾತ್ರವಲ್ಲ, ಆಡಳಿತಾತ್ಮಕ ಆತ್ಮಾವಲೋಕನದಿಂದ ಮಾತ್ರ ಸಾಧ್ಯ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





