ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ. ತೆರಿಗೆ ಏರಿಕೆಯು ಜನರ ಆರೋಗ್ಯ ಸುಧಾರಿಸುವ ಬದಲು, ಶೇ.೨೫-೩೦ ರಷ್ಟು ಮಾರುಕಟ್ಟೆಯನ್ನು ಕಾಳಸಂತೆಯ ಪಾಲಾಗುವಂತೆ ಮಾಡಿದೆ. ಇದು ಕೇವಲ ಆರ್ಥಿಕ ಅಪರಾಧವಲ್ಲ; ರಾಷ್ಟ್ರೀಯ ಭದ್ರತೆಗೆ ಹೊಡೆತ ನೀಡುವ ‘ಆರ್ಥಿಕ ಭಯೋತ್ಪಾದನೆ’. ಅಕ್ರಮವಾಗಿ ಬರುವ ವಿದೇಶಿ ಉತ್ಪನ್ನಗಳಲ್ಲಿ ಯಾವುದೇ ಶಾಸನಬದ್ಧ ಎಚ್ಚರಿಕೆಗಳಿಲ್ಲದಿರುವುದು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಸರ್ಕಾರವು ಈ ದಂಧೆಯನ್ನು ಬುಡಸಮೇತ ಕಿತ್ತೆಸೆಯಲು ‘ಶೂನ್ಯ ಸಹನೆ’ ನೀತಿ ಅನುಸರಿಸಬೇಕು. ಕಳ್ಳಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಪ್ರಾಮಾಣಿಕ ತೆರಿಗೆದಾರರು ಮತ್ತು ದೇಶೀಯ ಉತ್ಪಾದಕರು ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು





