Mysore
29
clear sky

Social Media

ಮಂಗಳವಾರ, 20 ಜನವರಿ 2026
Light
Dark

ಕಾರು ಹರಿದು ನಾಟಕ ನೋಡಿ ಮಲಗಿದ್ದ ವ್ಯಕ್ತಿ ಸಾವು

ನಂಜನಗೂಡು: ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ನಾಟಕ ನೋಡಿ ಅಲ್ಲೇ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದವನ ಮೇಲೆ ಕಾರೊಂದು ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾ ಮುಂಜಾನೆ ನಡೆದಿದೆ.

ತಾಲ್ಲೂಕಿನ ಗಟ್ಟವಾಡಿ ಗ್ರಾಮದ ನಿವಾಸಿ ಪ್ರದೀಪ್ ಕುಮಾರ್ (೩೩) ಮೃತಪಟ್ಟವರು. ಆತನ ಸ್ನೇಹಿತ ಅದೇ ಗ್ರಾಮದ ನಿವಾಸಿ ರವಿ (೩೦)ಎಂಬಾತ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರದೀಪ್ ಕುಮಾರ್ ಹಾಗೂ ರವಿ ಜಾತ್ರೆಗೆ ಬಂದವರು ಭಾನುವಾರ ರಾತ್ರಿ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ರಾತ್ರಿ ನಾಟಕ ನೋಡಿಕೊಂಡು ಬಳಿಕ ಊರಿಗೆ ತೆರಳಲು ಮುಂದಾಗಿದ್ದರು. ಆದರೆಮಧ್ಯರಾತ್ರಿ ಬಸ್ಸು ಲಭ್ಯವಿಲ್ಲದ ಕಾರಣ ರಂಗಸ್ಥಳದ ಪಕ್ಕದ ಕುಪ್ಪರವಳ್ಳಿ ರಸ್ತೆಯ ತಾತ್ಕಾಲಿಕ ವಾಹನ ಪಾರ್ಕಿಂಗ್ ಆವರಣದ ಸ್ಥಳದಲ್ಲಿ ಟಿಕೆಟ್ ವಿತರಣೆ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತ ಗಟ್ಟವಾಡಿ ಗ್ರಾಮದ ರವಿ ಎಂಬಾತನೊಂದಿಗೆ ಪಾರ್ಕಿಂಗ್ ಸ್ಥಳದಲ್ಲಿನ ಟಿಕೆಟ್ ಕೌಂಟರ್‌ನಲ್ಲಿ ಮಲಗಿದ್ದರು. ಸೋಮವಾರ ಮುಂಜಾನೆ ೩ ಗಂಟೆ ವೇಳೆಯಲ್ಲಿ ಅಪರಿಚಿತ ಕಾರು ಮಲಗಿದ್ದವರ ಮೇಲೆ ಹರಿದಿದೆ. ಆ ಕಾರಿನ ಚಾಲಕನ ಅಜಾಗ ರೂಕತೆ ಮತ್ತು ಅತಿ ವೇಗದಿಂದ ನಿದ್ರೆಯಲ್ಲಿದ್ದ ಪ್ರದೀಪ್ ಕುಮಾರ್ ಮತ್ತು ರವಿ ಅವರ ಮೇಲೆ ಕಾರು ಹರಿಸಿದ ಪರಿಣಾಮ ಕಾರಿನ ಚಕ್ರ ಪ್ರದೀಪನ ತಲೆಯ ಮೇಲೆ ಚಲಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಆತನ ಸ್ನೇಹಿತ ರವಿಯ ತಲೆ, ಮುಖ ಮತ್ತು ಕಾಲಿಗೆ ತೀವ್ರವಾ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೃತ ಪ್ರದೀಪ್ ಕುಮಾರ್ ಪತ್ನಿ ಅಂಬಿಕಾ ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದರು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ದರ್ಶನ್ ಧ್ರುವನಾರಾಯಣ ಸೋಮವಾರ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!