ಮೈಸೂರಿನ ಹೆಬ್ಬಾಳು ಬಡಾವಣೆಯ ಸೂರ್ಯಬೇಕರಿ ಸಮೀಪ ಎರಡನೇ ಅಡ್ಡರಸ್ತೆಯ ಬಳಿ ಇರುವ ಚರಂಡಿಯನ್ನು ಕಳೆದ ಎರಡು-ಮೂರು ತಿಂಗಳಿನಿಂದ ಸ್ವಚ್ಛಗೊಳಿಸದೇ ಇರುವುದರಿಂದ ಹೂಳು ತುಂಬಿಕೊಂಡು ಹುಲ್ಲು ಬೆಳೆದಿದೆ.
ಚರಂಡಿಯಲ್ಲಿ ನೀರು ಹರಿಯದೇ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ, ನೊಣಗಳ ಹಾಳಿ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ. ಮೈಸೂರು ಮಹಾನಗರ ಪಾಲಿಕೆ ಅಽಕಾರಿಗಳು ಕೂಡಲೇ ಚರಂಡಿಯನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಆರ್.ಯಶಸ್, ಮೈಸೂರು





