ಬೆಂಗಳೂರು: ಅಣ್ಣ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯಿಂದ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಡ್ ಸುಗ್ಗಿ ಕೊಡುತ್ತಾ ಎನ್ನುವ ಪ್ರಶ್ನೆಗೆ ಮಾರ್ಮಿಕವಾಗಿ ನುಡಿದರು.
ಈ ಬಗ್ಗೆ ಮಾತನಾಡಿದ ಅವರು, ಇಡೀ ರಾಜ್ಯದ ಜನತೆಗೆ ಸುಗ್ಗಿ ಹಬ್ಬ ಇರುತ್ತೆ. ದೆಹಲಿಯಿಂದಲೂ ಒಳ್ಳೆ ಸುದ್ದಿ ಸಿಗುತ್ತೆ, ರಾಜ್ಯದಿಂದಲೂ ಸಿಗುತ್ತೆ. ಹೈಕಮಾಂಡ್ ಎಲ್ಲಾ ನಿರ್ಧಾರ ಮಾಡೋಕು ಸಮಯ ಬೇಕು ಎಂದು ಹೇಳಿದರು.
ಈ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಿಹಿಸುದ್ದಿ ನೀಡಲಿದ್ದು ಪಕ್ಕಾ ಎನ್ನಲಾಗಿದ್ದು, ಡಿಕೆಶಿ ದೆಹಲಿಯಿಂದ ಬಂದ ಬಳಿಕವಷ್ಟೇ ಇದಕ್ಕೆಲ್ಲಾ ಉತ್ತರ ಸಿಗಲಿದೆ.





