ಚಾಮರಾಜನಗರ: ಚಾಮರಾಜನಗರದ ಕಾಡಂಚಿನ ಗ್ರಾಮದಲ್ಲಿ ಹುಲಿ ಸಂಚಾರ ಸಾಕಷ್ಟು ಭೀತಿ ಹುಟ್ಟಿಸಿದ್ದು, ಇದೀಗ ನಂಜೇದೇವನಪುರದಲ್ಲಿ ಮತ್ತೊಂದು ಹುಲಿ ಮರಿ ಸೆರೆಯಾಗಿದೆ.
ನಂಜೇದೇವನಪುರ ಬಳಿ ತಾಯಿ ಹಾಗೂ ನಾಲ್ಕು ಮರಿ ಹುಲಿಗಳು ಕಾಣಿಸಿಕೊಂಡಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ಗಂಡು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿಯಾಗಿದೆ.
ಈಗಾಗಲೇ ತಾಯಿ ಹುಲಿ ಹಾಗೂ ಒಂದು ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿತ್ತು. ಇನ್ನು ಉಳಿದ ಹುಲಿ ಮರಿಗಳು ಆನೆಮಡುವಿನ ಕೆರೆ ಹಿಂಭಾಗ ಬೀಡು ಬಿಟ್ಟಿವೆ ಎನ್ನಲಾಗಿದ್ದು, ಹುಲಿಗಳ ಸೆರೆ ಕಾರ್ಯಾಚರಣೆ ಮುಂದುವರಿದಿದೆ.





