Mysore
29
clear sky

Social Media

ಭಾನುವಾರ, 18 ಜನವರಿ 2026
Light
Dark

ಮಂಗನ ಕಾಯಿಲೆ ನಿಯಂತ್ರಣಕ್ಕೆ ಡೆಪಾ ತೈಲ ಖರೀದಿಗೆ ಅನುಮೋದನೆ

ಬೆಂಗಳೂರು: ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯವಿರುವ ಡೆಪಾ ತೈಲ ಖರೀದಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಕೆಎಫ್‌ಡಿ ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಸೋಂಕಿನ ಅಪಾಯ ಕಡಿಮೆ ಮಾಡಲು ಡೆಪಾ ತೈಲ ಸಹಕಾರಿಯಾಗಿದೆ. ಸದ್ಯ 2.78 ಲಕ್ಷ ಡೆಪಾ ತೈಲದ ಬಾಟಲಿಗಳು ಲಭ್ಯವಿದೆ.

ಈ ದಾಸ್ತಾನನ್ನು ಫೆಬ್ರವರಿ ಎರಡನೇ ವಾರದವರೆಗೆ ವಿತರಿಸಬಹುದುದಾಗಿದೆ. ಮಾರ್ಚ್ ನಿಂದ ಜೂನ್‌ವರೆಗೆ ವಿತರಿಸಲು 5.74 ಲಕ್ಷ ಡೆಪಾ ತೈಲದ ಬಾಟಲಿಗಳು ಅಗತ್ಯವಿದ್ದು, ಅಷ್ಟು ಪ್ರಮಾಣದಲ್ಲಿ ತೈಲ ಖರೀದಿಗೆ ಅನುಮೋದನೆ ನೀಡಲಾಗಿದೆ.

 

Tags:
error: Content is protected !!