Mysore
20
clear sky

Social Media

ಶುಕ್ರವಾರ, 16 ಜನವರಿ 2026
Light
Dark

ಸ್ಟಾರ್ ನಟಿಯ ಜೊತೆ ಧನುಷ್ ಕಲ್ಯಾಣ? ; ವೈರಲ್ ಆಗ್ತಿದೆ ಮದುವೆಯ ಗುಸುಗುಸು!

ಚೆನ್ನೈ : ಕಾಲಿವುಡ್‌ ನಟ ಧನುಷ್ ಸ್ಟಾರ್ ನಟಿಯನ್ನು ಕೈ ಹಿಡಿಯಲು ಸಿದ್ದರಾಗಿದ್ದಾರೆ. ಹೌದು ಹೀಗೊಂದು ಸುದ್ದಿ ಸಿನಿಮಾ ಇಂಡಸ್ಟ್ರಿಯಲ್ಲಿ ಗುಲ್‌ ಹಬ್ಬಿಸಿದೆ.

ಧನುಷ್ ನಟಿ ಮೃಣಾಲ್ ಠಾಕೂರ್ ಜೊತೆ ಎರಡನೇ ವಿವಾಹವಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಧನುಷ್ ಹಾಗೂ ಮೃಣಾಲ್ ಠಾಕೂರ್ ಹಲವಾರು ವೇದಿಕೆಯಲ್ಲಿ, ಪಾರ್ಟಿಗಳಲ್ಲಿ, ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಧನುಷ್ ಹಾಕಿರುವ ಪೋಸ್ಟ್‌ಗಳಿಗೆ ಮೃಣಾಲ್ ಲೈಕ್ ಕೊಡೋದು ಕಮೆಂಟ್ಸ್ ಹಾಕೋದು ಮಾಡುತ್ತಿದ್ದರು. ಇವೆಲ್ಲ ಘಟನೆಗಳು ಅವ್ರಿಬ್ಬರ ಮಧ್ಯೆ ಗಾಸಿಪ್ ಸೃಷ್ಟಿಸಿತ್ತು. ಆದ್ರೆ ಇದೆಲ್ಲದಕ್ಕೂ ಈಗ ತೆರೆ ಎಳೆಯುವ ಸಮಯ ಬಂದಂತಿದೆ. ಅಂದಹಾಗೆ ಮೃಣಾಲ್ ಹಾಗೂ ಧನುಷ್ ಸನ್ ಆಫ್ ಸರ್ಧಾರ್-2 ಸಿನಿಮಾದ ಪ್ರೀಮಿಯರ್‌ನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡ ಬಳಿಕವಂತೂ ಪ್ರೀತಿ, ಪ್ರೇಮದ ಗುಲ್ಲು ಜೋರಾಗಿತ್ತು. ಇದೀಗ ಇಬ್ಬರೂ ಮದುವೆ ಆಗುತ್ತಿದ್ದಾರೆ ಎನ್ನಲಾಗ್ತಿದೆ. ಅದ್ರಲ್ಲೂ ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಅಂದಹಾಗೆ ಧನುಷ್‌ ಈ ಮೊದಲು ರಜನಿಕಾಂತ್‌ ಅವರ ಮಗಳು ಐಶ್ವರ್ಯ ಅವರನ್ನು ಮದುವೆಯಾಗಿ 20ವರ್ಷ ಸಂಸಾರ ನಡೆಸಿ 2024ರಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಗುಡ್‌ ಬೈ ಹೇಳಿದ್ದರು.

Tags:
error: Content is protected !!