ತುಮಕೂರು : ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಕೆ.ಎನ್ ರಾಜಣ್ಣ ನಿವಾಸಕ್ಕೆ ಭೇಟಿ ನೀಡಿದ್ದರು
ಈ ವೇಳೆ ಅವರ ನಿವಾಸದಲ್ಲಿ ಸಿಎಂ ಅವರಿಗೆ ವಿಶೇಷವಾಗಿ ಔತಣಕೂಟದಲ್ಲಿ ಏರ್ಪಡಿಸಲಾಗಿತ್ತು.
ಊಟ ಸೇವಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಎನ್ ರಾಜಣ್ಣ ನಿವಾಸಸದಲ್ಲಿ ಸಿದ್ದಪಡಿಸಿದ್ದ ಊಟ ಚೆನ್ನಾಗಿತ್ತು ನನಗೆ ಹುಷಾರಿಲ್ಲ ಜ್ವರ ಇದ್ದುದ್ದರಿಂದ ಬಾಯಿ ಕೆಟ್ಟೋಗಿತ್ತು, ರಾಗಿ ಮುದ್ದಿ, ಕಾಲ್ ಸೂಪ್ ನಾಟಿಕೋಳಿ ಸಾರು ಸೇರಿದಂತೆ ಹಲವು ಸಾಂಪ್ರದಾಯಿಕ ಖಾದ್ಯಗಳು ಚೆನ್ನಾಗಿತ್ತು ಎಂದರು.
ಕೆಎನ್ ರಾಜಣ್ಣಗೆ ಮತ್ತ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಜಣ್ಣಗೆ ಯಾವಗಲೂ ಸಿಹಿಸುದ್ದಿಯೇ ಇರುತ್ತೆ. ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ಕೆ.ಎನ್.ರಾಜಣ್ಣ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಎಲ್ಲರ ಗಮನ ಸೆಳೆದಿದೆ.





