Mysore
32
few clouds

Social Media

ಶನಿವಾರ, 07 ಮಾರ್ಚ್ 2026
Light
Dark

ಹಾಸನ: ಮಹಿಳೆಯನ್ನು ಕೊಂದಿದ್ದ ಕಾಡಾನೆ ಸೆರೆಗೆ ಸಾಕಾನೆಗಳ ಮೂಲಕ ಕಾರ್ಯಾಚರಣೆ

ಹಾಸನ: ಇತ್ತೀಚೆಗೆ ಸಕಲೇಶಪುರ ಸಮೀಪದ ಮಹಿಳೆಯೊಬ್ಬರನ್ನು ತುಳಿದು ಕೊಂದು ಹಾಕಿದ್ದ ಕಾಡಾನೆ ಸೆರೆಗೆ ಕುಮ್ಕಿ ಆನೆಗಳ ತಂಡ ಭೈರಾಪುರಕ್ಕೆ ಆಗಮಿಸಿದೆ.

ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಮತ್ತು ಸುಗ್ರೀವ ಆನೆಗಳು ಈ ತಂಡದಲ್ಲಿವೆ. ಇಂದಿನಿಂದಲೇ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ.

ಸ್ಥಳೀಯರ ಒತ್ತಾಯಕ್ಕೆ ಮಣಿದು ಕೊಡಗು ಭಾಗದಿಂದ ಬಂದ ಈ ನರಹಂತಕ ಆನೆಯನ್ನು ಸೆರೆಹಿಡಿಯಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಆದೇಶಿಸಿದ್ದರು.

ಇತ್ತೀಚೆಗೆ ಆಲೂರು ಸಮೀಪ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶೋಭ ಅವರ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹ ಮೇಲೆತ್ತಲು ಬಿಡದೇ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಶಾಸಕ ಸಿಮೆಂಟ್ ಮಂಜು ಅವರು ಅರಣ್ಯ ಸಚಿವ ಈಶ್ವರ್‌ ಖಂಡ್ರೆಗೆ ಕರೆ ಮಾಡಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪುಂಡಾನೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

 

Tags:
error: Content is protected !!