Mysore
18
scattered clouds

Social Media

ಶನಿವಾರ, 17 ಜನವರಿ 2026
Light
Dark

ಸಂಕ್ರಾಂತಿ ವೇಳೆ ಕಿಚ್ಚು ಹಾಯಿಸುವಾಗ ಯಡವಟ್ಟು: ಜನರ ಮೇಲೆ ಎಗರಿದ ಎತ್ತುಗಳು

ಮಂಡ್ಯ: ಸಂಕ್ರಾಂತಿ ಸಂಭ್ರಮದಲ್ಲಿ ಕಿಚ್ಚು ಹಾಯಿಸುವ ವೇಳೆ ಯಡವಟ್ಟಾಗಿದೆ. ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿದ್ದಕ್ಕೆ ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯದ ಹೊಸಹಳ್ಳಿಯಲ್ಲಿ ನಡೆದಿದೆ.

ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ಕಿಚ್ಚು ಹಾಯಿಸಲು ರೈತರು ಎತ್ತುಗಳನ್ನು ಶೃಂಗರಿಸಿದ್ದರು. ಸೂರ್ಯಾಸ್ತದ ಬಳಿಕ ಕಿಚ್ಚು ಹಾಯಿಸಲು ಆರಂಭಿಸಲಾಗಿತ್ತು. ಈ ವೇಳೆ ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿ ಓಡಿಹೋಗಿವೆ. ಪರಿಣಾಮ ಇಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

 

Tags:
error: Content is protected !!