Mysore
28
haze

Social Media

ಭಾನುವಾರ, 08 ಮಾರ್ಚ್ 2026
Light
Dark

ಓದುಗರ ಪತ್ರ | ಸುಗ್ಗಿಯ ಹಬ್ಬ ಸಂಕ್ರಾಂತಿ

ಮನೆ ಮಂದಿ ಮಕ್ಕಳು ಕೂಡಿ
ಕಣ ಹೊಕ್ಕಿ, ಹೊಲ ಗದ್ದೆಯೆಲ್ಲಾ
ಬೆಳೆದ ಬೆಳೆ ಕೈಗೆ ಬಂದೈತಿ
ನಗುವಿಂದ ಮಿಂದು
ಸುಗ್ಗಿಯ ಸಂಕ್ರಾಂತಿ ತಂದೈತಿ

ಸಾಕಿದ ರಾಸುಗಳಿಗೂ
ಕೊಂಬು, ಕೋಡು ತೀಡಿ
ಬಣ್ಣ ಬಳಿದು ಕಿಚ್ಚು ಹಾಯಿಸಿ
ಎಳ್ಳು ಬೆಲ್ಲ ಸವಿದು
ಒಳ್ಳೆದು ನುಡಿದು
ಆಚರಿಸೋಣ
ಸುಗ್ಗಿಯ ಸಂಕ್ರಾಂತಿ

-ಶಿವಣ್ಣ ಕಣೇನೂರು, ನಂಜನಗೂಡ

Tags:
error: Content is protected !!