ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬಹುರೂಪಿ ನಾಟಕೋತ್ಸವ ನಡೆಯುತ್ತಿದೆ. ಸಿನಿಮಾ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಹಾಗೂ ನಾಟಕಕ್ಕೆ ಪ್ರತಿ ಟಿಕೆಟ್‌ಗೆ ರೂ. ೧೦೦ ದರ ನಿಗದಿ ಮಾಡಲಾಗಿದೆ. ಆದರೆ ಎಲ್ಲ ನಾಟಕಗಳೂ ಬಯಲು ಪ್ರದೇಶವಾದ ವನರಂಗದಲ್ಲಿ ಸಂಜೆ ೭ರಿಂದ ನಡೆಯುತ್ತವೆ.
ಈಗ ಚಳಿಗಾಲವಾದ್ದರಿಂದ ಟಿಕೆಟ್ ತೆಗೆದುಕೊಂಡವರು ಕನಿಷ್ಠ ಮೂರು ಗಂಟೆಗಳ ಕಾಲ ನಾಟಕವನ್ನು ವೀಕ್ಷಣೆ ಮಾಡಬೇಕಾಗುತ್ತದೆ. ಸಂಜೆ ಸಮಯದಲ್ಲಿ ಮಂಜು ಬೀಳುತ್ತಿರುತ್ತವೆ. ವಯಸ್ಸಾದವರು ಚಳಿಯಲ್ಲಿ ನಾಟಕ ವೀಕ್ಷಿಸುವುದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ವರ್ಷದಿಂದ ವನರಂಗದ ಬಯಲು ಮಂದಿರ ಮೇಲ್ಭಾಗವನ್ನು ತಾರಸಿ ಅಥವಾ ಕಲ್ನಾರ್ ಶೀಟ್‌ಗಳಿಂದ ಮುಚ್ಚಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
– ಜಿ. ಪಿ. ಹರೀಶ್, ವಿ. ವಿ. ಮೊಹಲ್ಲ, ಮೈಸೂರು




