ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ.
ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ ಎಂಬ ಡಿಕೆಶಿ ಬಣದ ಶಾಸಕರ ಹೇಳಿಕೆ ಕುರಿತು ಮಾತನಾಡಿದರು.
ಸಿಹಿಸುದ್ದಿನಾದರೂ ಬರಲಿ ಏನಾದರೂ ಬರಲಿ. ಸಿಹಿಸುದ್ದಿ ಕಹಿಸುದ್ದಿ ಕೊಡುವುದು ಹೈಕಮಾಂಡ್, ಏನೇ ಆಗಿದ್ದರೂ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು. ಎಲ್ಲಾ ಗೊಂದಲವನ್ನು ಹೈಕಮಾಂಡ್ ನಿವಾರಣೆ ಮಾಡಬೇಕು. ಗೊಂದಲ ಪರಿಹರಿಸದಿದ್ದರೆ ಆಡಳಿತದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.





