ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಅರಣ್ಯ ಪ್ರದೇಶದಿಂದ ಬಂದ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಹುಲಿ ದಾಳಿ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ, ಹುಲಿ ತಿಂದು ಬಿಟ್ಟಿರುವ ಹಸುವಿನ ಕಳೇಬರವನ್ನು ಪರಿಶೀಲಿಸಿ, ಹಿರಿಇಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮ.ಬೆಟ್ಟ ಸನಿಹದಲ್ಲಿರುವ ಗ್ರಾಮದ ನಿವಾಸಿಗಳು ಹುಲಿ ದಾಳಿಯಿಂದ ಭೀತಿಗೊಂಡಿದ್ದು, ಬೇರೆ ಕಡೆಯಿಂದ ಹುಲಿಯನ್ನು ತಂದು ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದರಿಂದ ಹುಲಿ ಹಸುವನ್ನು ಕೊಂದು ತಿಂದಿದೆ. ಶೀಘ್ರದಲ್ಲಿ ಹುಲಿಯನ್ನು ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.




