ಮಂಡ್ಯ : ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟಿಸಲಾಯಿತು.
ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಭೂ ವಿವಾದದ ನೆಪ ಮಾಡಿ, ಅಮಾನುಷವಾಗಿ ದೌರ್ಜನ್ಯ ಮಾಡಲಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಡಳಿತ ದಲಿತರ ಮಾನ, ಪ್ರಾಣ, ಆಸ್ತಿ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮ ಸರ್ವೆ ನಂ.೧೨/೬ರಲ್ಲಿನ ೦೫ ಗುಂಟೆ ಸ್ವಂತ ಜಮೀನು ಮತ್ತು ೧೨/೫ರ ೦೮ ಖರಾಬು ಭೂಮಿಯ ಸ್ವಾಧಿನಾನುಭವದಲ್ಲಿರುವ ಕಟ್ಟಿಗೆರೆ ದಲಿತ ಮಹಿಳೆ ರಜನಿ ಅವರು ೨೦ ತೆಂಗಿನ ಮರಗಳನ್ನು ಬೆಳೆಸಿಕೊಂಡು ಜೀವನ ನಡೆಸುತ್ತಿರುವ ಭೂಮಿಯನ್ನು ಕಂದಾಯ ಮತ್ತು ಸರ್ವೆ ಇಲಾಖಾಧಿಕಾರಿಗಳು ನಿಮಾನುಸಾರ ಕ್ರಮವಹಿಸದೆ ಭೂ ವಿವಾದಕ್ಕೆ ಆಸ್ಪದ ಮಾಡಿ, ರಜನಿ ಅವರ ಮೇಲೆ ದೌರ್ಜನ್ಯ ನಡೆಸಿರುವವರ ವಿರುದ್ಧ ಹಾಗೂ ಅಧಿಕಾರಿಗಳ ಮೇಲೆ ಕಾನೂನು ಕ್ರಮಹಿಸಬೇಕೆಂದು ಆಗ್ರಹಿಸಿದರು.
ಹಾಲಿ ಇರುವ ಸಾರ್ವಜನಿಕ ಬಂಡಿದಾರಿಯನ್ನು ಬಿಡದೆ ದಾರಿಗೆ ಅಡ್ಡಲಾಗಿ ಸೌದೆಗಳನ್ನು ಗುಡ್ಡೆಹಾಕಿ ಭತ್ತದ ಗಾಡಿ ಹೋಗಲು ದಾರಿ ಬಿಡದೆ ಅಡ್ಡಿಪಡಿಸಿ ದಲಿತ ಮಹಿಳೆ ರಜನಿ ಅವರನ್ನು ಬಹಿರಂಗವಾಗಿ ಜಾತಿ ನಿಂದನೆ, ದೈಹಿಕ ಹಲ್ಲೆ, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದ ಶರತ್, ಬೆಟ್ಟೇಗೌಡ, ಸಿದಣ್ಣ, ಶಿವಣ್ಣ, ಸ್ವರೂಪ್ ಅವರನ್ನು ಕೂಡಲೇ ಬಂಽಸಬೇಕೆಂದು ಒತ್ತಾಯಿಸಿದರು.
ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಉಪಾಧ್ಯಕ್ಷ ಬಿ.ಆನಂದ್, ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ಹೊಸಹಳ್ಳಿ, ಮುಖಂಡರಾದ ನಾಗರಾಜು, ಸಿದ್ದಯ್ಯ, ಮುತ್ತರಾಜು, ಪುಟ್ಟಲಿಂಗಯ್ಯ, ಶಶಿರೇಖಾ, ಶರಾವತಿ, ಮಹದೇವ, ಸುರೇಶ್ ಕುಮಾರ್, ವೆಂಕಟೇಶ್, ಕರಿಯಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





