Mysore
27
scattered clouds

Social Media

ಶನಿವಾರ, 10 ಜನವರಿ 2026
Light
Dark

ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್ ; ನಿಲ್ಲದ ʻರಾಯʼನ ಅಬ್ಬರ

ಬೆಂಗಳೂರು : ರಾಕಿ ಬಾಯ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ ಬರೋಬ್ಬರಿ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀವ್ಸ್ ಪಡೆದುಕೊಂಡಿದೆ. ‌

ಟಾಕ್ಸಿಕ್ ಅಬ್ಬರಕ್ಕೆ ‘ಕೆಜಿಎಫ್ 2’, ‘ಕಾಂತಾರ: ಚಾಪ್ಟರ್ 1’ ಮೊದಲಾದ ಸಿನಿಮಾಗಳು ಬರೆದಿದ್ದ ದಾಖಲೆಗಳೆಲ್ಲ ಉಡೀಸ್ ಆಗಿವೆ. 24 ಗಂಟೆಯಲ್ಲಿ ‘ಟಾಕ್ಸಿಕ್’ ಟೀಸರ್ ಬರೋಬ್ಬರಿ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀವ್ಸ್ ಪಡೆದುಕೊಂಡಿದೆ.

ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದು, ‘ಟಾಕ್ಸಿಕ್’ ಸಿನಿಮಾ ಟೀಸರ್ ಯೂಟ್ಯೂಬ್ ಜೊತೆಗೆ ಇನ್​​ಸ್ಟಾಗ್ರಾಮ್, ಫೇಸ್​​ಬುಕ್ ಸೇರಿದಂತೆ ವಿವಿಧ ಡಿಜಿಟಲ್ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಎಲ್ಲಾ ಫ್ಲ್ಯಾಟ್​ಫಾರ್ಮ್​​ಗಳ ವೀಕ್ಷಣೆಗಳನ್ನು ಪರಿಗಣಿಸಿ, ‘ಟಾಕ್ಸಿಕ್’ ಟೀಸರ್ ವೀಕ್ಷಣೆ 200 ಮಿಲಿಯನ್ ಎಂದು ಕೆವಿಎನ್ ಪ್ರೊಡಕ್ಷನ್ಸ್ ಘೋಷಣೆ ಮಾಡಿದೆ. 55 ಲಕ್ಷಕ್ಕೂ ಅಧಿಕ ಲೈಕ್ಸ್​​ಗಳು ಸಿಕ್ಕಿವೆ. ಈ ಮೂಲಕ ಸಿನಿಮಾಗೆ ದೊಡ್ಡ ಬೂಸ್ಟ್ ಸಿಕ್ಕಿದೆ ಎಂದು ಹೇಳಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಜೊತೆಗೆ ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈಗಾಗಲೇ ‘ಧುರಂಧರ್’ ಹಿಟ್ ಆಗಿರುವುದರಿಂದ ‘ಧುರಂಧರ್ 2’ ಬಗ್ಗೆ ನಿರೀಕ್ಷೆ ಇದೆ. ಈ ಕಾರಣದಿಂದಲೇ ‘ಟಾಕ್ಸಿಕ್’ ಚಿತ್ರಕ್ಕೆ ಈ ಸಿನಿಮಾ ದೊಡ್ಡ ಸವಾಲಗಾಬಹುದು ಎಂದು ಹೇಳಲಾಗುತ್ತಿದೆ. ಆದರೆ, ‘ಟಾಕ್ಸಿಕ್’ ಚಿತ್ರದ ಅಬ್ಬರ ನೋಡಿ ಬಾಲಿವುಡ್ ಮಂದಿ ದಂಗಾಗಿದ್ದಾರೆ. ಈ ಮೊದಲು ತೆರೆಗೆ ಬಂದಿದ್ದ ‘ಕೆಜಿಎಫ್ 2’ ಸಿನಿಮಾ 24 ಗಂಟೆಯಲ್ಲಿ 109 ಮಿಲಿಯನ್ ಡಿಜಿಟಿಲ್ ವ್ಯೂವ್ಸ್, ‘ಕಾಂತಾರ: ಚಾಪ್ಟರ್ 1’ 107 ಮಿಲಿಯನ್, ‘ಅನಿಮಲ್’ 71 ಮಿಲಿಯನ್ ಹಾಗೂ ‘ಪುಷ್ಪ 2’ 107 ಮಿಲಿಯನ್ ವೀಕ್ಷಣೆ ಕಂಡಿತ್ತು. ಈ ಎಲ್ಲಾ ದಾಖಲೆಗಳನ್ನು ಯಶ್ ಅವರು ಪೀಸ್ ಪೀಸ್ ಮಾಡಿದ್ದಾರೆ.

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಯಶ್ ಜೊತೆ ತಾರಾ ಸುತಾರಿಯಾ, ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

Tags:
error: Content is protected !!