Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಓದುಗರ ಪತ್ರ: ಶಾಲೆಗಳಲ್ಲಿ ಕನ್ನಡ ದಿನ ದಿನಪತ್ರಿಕೆಗಳ ಓದು ಕಡ್ಡಾಯವಾಗಲಿ

ಓದುಗರ ಪತ್ರ

ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು ಸುಧಾರಿಸಲು ಅಲ್ಲಿನ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿರುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಬೇಕು.

ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಕನ್ನಡ ದಿನಪತ್ರಿಕೆಗಳ ಪಾತ್ರ ಬಹುಮುಖ್ಯವಾಗಿದೆ. ಕನ್ನಡ ಶಬ್ದಗಳನ್ನು ಪ್ರತಿನಿತ್ಯ ಬಳಸುವುದರಿಂದ ಕನ್ನಡ ಶಬ್ದ ಭಂಡಾರವು ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಭಾಷಾ ಕೌಶಲ ಸುಧಾರಣೆ, ಹೊಸ ಪದಗಳು, ವಾಕ್ಯ ರಚನೆ, ಬರವಣಿಗೆ ಶೈಲಿ, ಭಾಷಾ ನೈಪುಣ್ಯತೆಯನ್ನು ಮಕ್ಕಳು ರೂಢಿಸಿಕೊಳ್ಳುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಪತ್ರಿಕೆಗಳನ್ನು ಓದಿಸುವುದು ಕಡ್ಡಾಯವಾದರೆ ಗ್ರಾಮೀಣ ಮಕ್ಕಳಿಗೂ ಜಾಗತಿಕ ಜ್ಞಾನ, ಹಳ್ಳಿಯ ಮಕ್ಕಳಿಗೆ ದೇಶ-ವಿದೇಶಗಳು ವಿದ್ಯಮಾನಗಳು ಸುಲಭವಾಗಿ ತಲುಪುತ್ತವೆ. ಪತ್ರಿಕೆಗಳಲ್ಲಿ ಬರುವ ಪದಬಂಧಗಳನ್ನು ಬಿಡಿಸಲು ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ, ಅವರಲ್ಲಿ ಆಲೋಚನಾ ಸಾಮರ್ಥ್ಯ ಹೆಚ್ಚುತ್ತದೆ.

ಶಾಲಾ ಸಮಯದಲ್ಲಿ ದಿನನಿತ್ಯ ೧೦-೧೫ ನಿಮಿಷ ಮೀಸಲಿಟ್ಟು, ಪತ್ರಿಕೆ ಓದುವುದು, ಕಠಿಣ ಪದಗಳ ಅರ್ಥ ತಿಳಿಯುವುದು, ಭಿತ್ತಿಪತ್ರಿಕೆಗಳ ಮೂಲಕ ವಿಶ್ಲೇಷಣೆ ಮಾಡುವುದು, ಮತ್ತು ಮಕ್ಕಳ ವಿಭಾಗದ ಬರಹಗಳಿಗೆ ಪ್ರೋತ್ಸಾಹಿಸುವುದು ಉತ್ತಮ. ಇದು ವಿದ್ಯಾರ್ಥಿಗಳನ್ನು ಜಾಗೃತ ನಾಗರಿಕರನ್ನಾಗಿ ರೂಪಿಸಲು ಸಹಕಾರಿಯಾಗುತ್ತದೆ.

 -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!