Mysore
18
scattered clouds

Social Media

ಸೋಮವಾರ, 12 ಜನವರಿ 2026
Light
Dark

ಲವ್‌ ಮಾಕ್ಟೇಲ್‌ 3 ಬಿಡುಗಡೆಗೆ ದಿನಾಂಕ ಘೋಷಣೆ

ನಟನಾಗಿ ಹೆಸರಾಗಿದ್ದ ಡಾರ್ಲಿಂಗ್‌ ಕೃಷ್ಣ ಲವ್‌ ಮಾಕ್ಟೇಲ್‌ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಅದಾದ ನಂತರ ಬಂದಿದ್ದ ಎರಡನೇ ಆವೃತ್ತಿಯೂ ಗೆದ್ದಿತ್ತು.

ಆ ಗೆಲುವಿನ ಪ್ರಭೆಯಲ್ಲಿ ಲವ್‌ ಮಾಕ್ಟೇಲ್‌ 3 ಚಿತ್ರಕ್ಕೆ ಚಾಲನೆ ನೀಡಿದ್ದ ಡಾರ್ಲಿಂಗ್‌ ಕೃಷ್ಣ, ಇತ್ತೀಚೆಗಷ್ಟೇ ಮೋಷನ್‌ ಪೋಸ್ಟರ್‌ ಲಾಂಚ್‌ ಮಾಡಿದ್ದರು. ಈ ಮೂಲಕ ಆವೃತ್ತಿ ನವಿರಾದ ಕುತೂಹಲವೊಂದಕ್ಕೆ ಚಾಲನೆ ನೀಡಿತ್ತು.

ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಡಾಲಿಂಗ್‌ ಕೃಷ್ಣ ಘೋಷಿಸಿದ್ದಾರೆ. ಇದರೊಂದಿಗೆ ಲವ್‌ ಮಾಕ್ಟೇಲ್‌ 3 ಪ್ರೇಕ್ಷಕರ ಮುಂದೆ ಬರಲು ಬರಲು ಇದೇ ಏಪ್ರಿಲ್‌.10ರಂದು ಮುಹೂರ್ತ ನಿಗದಿಯಾದಂತಾಗಿದೆ.

2020ರಲ್ಲಿ ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ ಲವ್‌ ಮಾಕ್ಟೇಲ್‌ ಚಿತ್ರ ತೆರೆಕಂಡಿತ್ತು. ನವಿರು ಪ್ರೇಮದೊಂದಿಗೆ ಹೊಸೆದುಕೊಂಡಿದ್ದ ಸೂಕ್ಷ್ಮ ಕಥನದ ಮೂಲಕ ಗೆದ್ದ ನಂತರ ಲವ್‌ ಮಾಕ್ಟೇಲ್‌ 2 ಚಿತ್ರವನ್ನು ಕೃಷ್ಣ ರೂಪಿಸಿದ್ದರು.

ಇದೀಗ ತೆರೆಕಾಣಲು ಸಜ್ಜಾಗಿರುವ ಲವ್‌ ಮಾಕ್ಟೇಲ್‌ 3 ಈ ಹಿಂದಿನ ಎರಡು ಆವೃತ್ತಿಗಿಂತಲೂ ಭಿನ್ನವಾಗಿರಲಿದೆ ಎಂಬ ವಿಚಾರವನ್ನಷ್ಟೇ ಕೃಷ್ಣ ಹಂಚಿಕೊಂಡಿದ್ದಾರೆ. ಕಥೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಲವ್‌ ಮಾಕ್ಟೇಲ್‌ 3 ಹೊಸ ಅನುಭೂತಿ ಕೊಡಲಿದೆ ಎಂದು ಕೃಷ್ಣ ಭರವಸೆ ನೀಡಿದ್ದಾರೆ.

 

Tags:
error: Content is protected !!