Mysore
17
broken clouds

Social Media

ಮಂಗಳವಾರ, 06 ಜನವರಿ 2026
Light
Dark

ಓದುಗರ ಪತ್ರ: ಸಫಾರಿ ಮರು ಆರಂಭ ಬೇಡ

ಓದುಗರ ಪತ್ರ

ಮೈಸೂರು ವಿಭಾಗದಲ್ಲಿ ಹುಲಿ ಚಿರತೆಗಳ ದಾಳಿಯಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದರು. ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸುವಂತೆ ರೈತ ಸಂಘ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದೀಗ ಮುಖ್ಯಮಂತ್ರಿಗಳು ಸಫಾರಿಯನ್ನು ಪುನರಾರಂಭಿಸುವ ಕುರಿತು ತಜ್ಞರಿಂದ ವರದಿ ಪಡೆಯುವಂತೆ ಅರಣ್ಯ ಸಚಿವರಿಗೆ ಸೂಚನೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಫಾರಿ ನಿಲ್ಲಿಸಿರುವುದರಿಂದ ಪ್ರಾಣಿಗಳ ಉಪಟಳ ಕಡಿಮೆಯಾಗಿದೆಯೇ, ಇಲ್ಲವೇ ಎನ್ನುವುದನ್ನು ತಿಳಿಯಲು ಒಂದೆರಡು ವರ್ಷಗಳಾದರೂ ಬೇಕು. ಸಫಾರಿ ನಿಲ್ಲಿಸಿರುವುದು ಸರ್ಕಾರ, ಹೋಟೆಲ್, ರೆಸಾರ್ಟ್‌ಗಳಿಗೆ ನಷ್ಟ ವಾಗಿದೆ. ಸಫಾರಿ ಗುತ್ತಿಗೆ ನೌಕರರಿಗೆ ವೇತನ ಕಡಿತಗೊಂಡಿದೆ ಎನ್ನುವುದು ಸಮಂಜಸ ಕಾರಣವಲ್ಲ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿ ವನ್ಯ ಜೀವಿಗಳಿಗೆ ಉಪಟಳ ನೀಡುವುದು ಸರಿಯಲ್ಲ.

ಸಫಾರಿ ನಿಲ್ಲಿಸಿರುವುದರಿಂದ ಕೆಲಸ ಕಳೆದುಕೊಂಡಿರುವವರಿಗೆ ಅವರ ಅರ್ಹತೆಗನುಗುಣವಾಗಿ ಬೇರೆ ಕೆಲಸಕ್ಕೆ ನಿಯೋಜಿಸಬೇಕು. ಕಾಡಂಚಿನಲ್ಲಿರುವ ರೆಸಾರ್ಟ್‌ಗಳನ್ನು ಬಂದ್ ಮಾಡಬೇಕು. ಪ್ರಾಣಿಗಳನ್ನು ನೋಡಲೇ ಬೇಕು ಎನ್ನುವವರು ನಗರಗಳಲ್ಲಿರುವ ಪ್ರಾಣಿ ಸಂಗ್ರಹಾಲಯಗಳಿಗೆ ಹೋಗಲಿ. ಸರ್ಕಾರ ಸಫಾರಿಗೆ ಮತ್ತೆ ಅನುಮತಿ ನೀಡುವುದು ಬೇಡ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!