ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ. ಈ ಕಾಲುವೆ ಎಡ ಭಾಗದಿಂದ ಸಾಗುವ ರಸ್ತೆ ಮಾರ್ಗವು ಶಾಂತವೇರಿ ಗೋಪಾಲಗೌಡ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಯಾಂದಳ್ಳಿ ಬಡಾವಣೆಗೆ ಸಂಪರ್ಕ ಕಲ್ಪಿಸುತ್ತದೆ. ಇವೆಲ್ಲ ಹೊಸ ಬಡಾವಣೆಗಳಾಗಿರುವುದರಿಂದ ಹೆಚ್ಚಾಗಿ ಮನೆಗಳು ನಿರ್ಮಾಣವಾಗುತ್ತಿವೆ.
ಈ ಕಾಲುವೆಯ ಪಕ್ಕ ಮಣ್ಣಿನ ರಸ್ತೆಯ ಮೂಲಕವೇ ಪ್ರತಿನಿತ್ಯ ನೂರಾರು ಜನರು ಅದರಲ್ಲೂ ಹೆಚ್ಚಾಗಿ ಜನ ಹೆಚ್ಚಾಗಿ ಕಟ್ಟಡ ಕಾರ್ಮಿಕರು ಸಂಚರಿಸುತ್ತಾರೆ. ವರುಣ ನಾಲೆಯ ಬಳಿ ತಡೆಗೋಡೆ ಹಾಗೂ ಬೀದಿ ದೀಪ ಇಲ್ಲದೇ ತೊಂದರೆಯಾಗಿದೆ. ಆದ್ದರಿಂದ ಅನಾಹುತಗಳು ಸಂಭವಿ ಸುವ ಮುನ್ನವೇ ಸಂಬಂಧಪಟ್ಟವರು ಕೂಡಲೇ ನಾಲೆಗೆ ತಡೆಗೋಡೆ ನಿರ್ಮಿಸಬೇಕು ಹಾಗೂ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು.
-ಅಹಲ್ಯ ಸಿ.ನಾ.ಚಂದ್ರ, ಜನತಾನಗರ, ಮೈಸೂರು





