ಮೈಸೂರಿನ ಬಹುತೇಕ ಭಾಗಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸುವುದು ಅನಿವಾರ್ಯವಾಗಿದೆ.
ನಗರದ ಚಾಮರಾಜ ಜೋಡಿ ರಸ್ತೆ, ನೃಪತುಂಗ ರಸ್ತೆ, ಶ್ರೀರಾಂಪುರ ಬೆಮೆಲ್ ನಗರ ರಸ್ತೆ, ಅಕ್ಕಮಹಾದೇವಿ ರಸ್ತೆ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ, ಮೀನಾ ಬಜಾರ್, ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ವೃತ್ತ, ಆಂದೋಲನ ವೃತ್ತದಿಂದ ದಟ್ಟಗಳ್ಳಿ ಕಡೆಗೆ ತೆರಳುವ ರಸ್ತೆ, ಸೂರ್ಯ ಬೇಕರಿ ಸರ್ಕಲ್ ಸೇರಿದಂತೆ ವಿವಿಧೆಡೆ ಫುಟ್‌ಪಾತ್ ಒತ್ತುವರಿಯಾಗಿದ್ದು, ಸಾರ್ವಜನಿಕರು ರಸ್ತೆಯ ಮೇಲೆ ನಡೆಯುವಾಗ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದರೂ ನಗರ ಪಾಲಿಕೆಯವರು ಹಾಗೂ ಪೊಲೀಸರು ಪಾದಚಾರಿ ಮಾರ್ಗದ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ಈಗಲಾದರೂ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





