Mysore
21
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಓದುಗರ ಪತ್ರ | ಸಫಾರಿ ಪುನರಾರಂಭಿಸಿ

ಇತ್ತೀಚಿನ ದಿನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಹುಲಿ ದಾಳಿಗೂ, ಮಾನವ-ವನ್ಯಜೀವಿ ಸಂಘರ್ಷಕ್ಕೂ ಸಫಾರಿಯೇ ನೇರ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳಾಗಲಿ, ಸೂಕ್ತ ಉತ್ತರವಾಗಲಿ ಇಲ್ಲ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಆದರೂ ಸಫಾರಿ ಬಂದ್ ಮಾಡಿರುವುದು ವಿಪರ್ಯಾಸ.

ಸಫಾರಿ ಬಂದ್ ಆಗಿರುವುದರಿಂದ ಅದನ್ನೇ ಅವಲಂಬಿಸಿ ಬದುಕು ನಡೆಸುತ್ತಿರುವ ಸಫಾರಿ ಗೈಡ್‌ಗಳು, ಚಾಲಕರು, ರೆಸಾರ್ಟ್ ಕಾರ್ಮಿಕರು, ಟೀ ಅಂಗಡಿಗಳು, ಹೋಟೆಲ್ ಕಾರ್ಮಿಕರು ಮತ್ತು ಮಾಲೀಕರು ಹಾಗೂ ಈ ಭಾಗದ ಕೆಲವು ಸಣ್ಣಪುಟ್ಟ ವ್ಯಾಪಾರಸ್ಥರನ್ನು ಒಳಗೊಂಡಂತೆ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ಸ್ಥಗಿತಗೊಂಡಿರುವ ಸಫಾರಿಯನ್ನು ಸೂಕ್ತ ಭದ್ರತೆಯೊಂದಿಗೆ ಮತ್ತೆ ಆರಂಭಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ.

-ಅನಿಲ್ ಮಳಲಿ, ಹೆಚ್. ಡಿ. ಕೋಟೆ

Tags:
error: Content is protected !!