Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕಾಲು ಜಾರಿ ನಾಲೆಗೆ ಬಿದ್ದ ಪತ್ನಿ: ರಕ್ಷಿಸಲು ಹೋಗಿ ಪತಿಯೂ ನೀರುಪಾಲು

ಹಾಸನ: ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದ ಪತ್ನಿ ಕಾಲು ಜಾರಿ ಬಿದ್ದಿದ್ದು, ರಕ್ಷಿಸಲು ಹೋದ ಪತಿ ಕೂಡ ನೀರುಪಾಲಾಗಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ನಂಬಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋಪಾಲ್‌ ಹಾಗೂ ದೀಪು ಎಂಬುವವರೇ ನೀರುಪಾಲಾಗಿರುವ ದುರ್ದೈವಿಗಳಾಗಿದ್ದಾರೆ.

ಇದನ್ನು ಓದಿ: ಶಾಲಾ ವಿದ್ಯಾರ್ಥಿನಿ ಗರ್ಭಿಣಿ ಮಾಡಿದ ಆರೋಪ: ನಾಲೆಗೆ ಹಾರಿ ಯುವಕ ಆತ್ಮಹತ್ಯೆ

ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲೆಂದು ದಂಪತಿ ಹೋಗಿದ್ದರು. ಈ ವೇಳೆ ಪತ್ನಿ ದೀಪು ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಆಕೆಯನ್ನು ರಕ್ಷಿಸಲು ಹೋಗಿ ಗೋಪಾಲ್‌ ಕೂಡ ನೀರಿಗೆ ಧುಮುಕಿದ್ದಾರೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!