Mysore
27
light rain

Social Media

ಮಂಗಳವಾರ, 13 ಜನವರಿ 2026
Light
Dark

ಕೋಟಿ ಸ್ಮರಣೆ; ಮಾಧ್ಯಮದ ಸಾಮಾಜಿಕ ಬದ್ಧತೆ ಕುರಿತು ಚಿಂತನೆ

‘ಮಾಧ್ಯಮ ಎಂಬುದು ಮಾರಾಟದ ಸರಕಲ್ಲ’ ವಿಚಾರ ಕುರಿತು ಆನ್‌ಲೈನ್ ಸಂವಾದ 

ಮೈಸೂರು: ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯದ ಭಾಷೆಯನ್ನು ಕಸಿ ಮಾಡಿದ್ದು ಪತ್ರಕರ್ತ ಪಿ.ಲಂಕೇಶ್ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ.ಎನ್.ಜಗದೀಶ್ ಕೊಪ್ಪ ತಿಳಿಸಿದರು.

‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಸ್ಮರಣೆ ಕಾರ್ಯ ಕ್ರಮದಲ್ಲಿ ‘ಆಂದೋಲನ’ ಕಚೇರಿಯಲ್ಲಿ ‘ಮಾಧ್ಯಮ ಎಂಬುದು ಮಾರಾಟದ ಸರಕಲ್ಲ’ ಎಂಬ ವಿಚಾರ ಕುರಿತು ನಡೆದ ಆನ್ ಲೈನ್ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮುದ್ರಣ ಮಾಧ್ಯಮವು ದೃಶ್ಯ ಮಾಧ್ಯಮಕ್ಕೆ ಒಳಗಾಗಿದ್ದು, ಪತ್ರಿಕೆಗಳ ಶೀರ್ಷಿಕೆಗಳು ದೃಶ್ಯ ಮಾಧ್ಯಮಗಳಂತೆ ಮೂಡಿಬರುತ್ತಿವೆ. ನಮ್ಮ ಕಾಲದಲ್ಲಿದ್ದ ಪತ್ರಿಕೋದ್ಯಮದ ಬದ್ಧತೆ ಇಂದು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳೆರಡರಲ್ಲೂ ಇಲ್ಲವಾಗಿದೆ. ಎಲ್ಲಿ ಹೋದವು ಆ ಬದ್ಧತೆ, ಈಗ ಇರುವುದು ಬರೀ ಅಭದ್ರತೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾನು ಪದವಿ ಪಡೆದು ಪತ್ರಿಕೋದ್ಯಮಕ್ಕೆ ಬಂದೆ, ಮೊದಲು ಚೆನ್ನೈನಲ್ಲಿ ಜಾಹೀರಾತು ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದೆ. ಆ ಸಮಯಕ್ಕೆ ಇದ್ದಿದ್ದು ದೂರ ದರ್ಶನ, ಉದಯ ಟಿವಿಯಷ್ಟೇ. ಅಂದು ರಾಜ ಕಾರಣಿ ಗಳು ಪ್ರಚಾರಕ್ಕಾಗಿ ಹಾತೊರೆಯುತ್ತಿದ್ದರು. ಆ ವೇಳೆ ಒಬ್ಬ ರಾಜಕಾರಣಿಯನ್ನೂ ಭೇಟಿಯಾಗದೆ ಅಂತರ ಕಾಯ್ದುಕೊಂಡು ಬಂದಿದ್ದೆವು. ಆದರೆ ಇಂದು ಪತ್ರಿಕೋದ್ಯಮದಲ್ಲಿ ಅಭದ್ರತೆ ಇದೆ ಎಂದು ಹೇಳಿದರು.

ಕನ್ನಡ ಪತ್ರಿಕೋದ್ಯಮಕ್ಕೆ ಪಿ.ಲಂಕೇಶ್ ಅವರು ಮಾದರಿಯಾದ ವ್ಯಕ್ತಿ, ಪತ್ರಿಕೋದ್ಯಮಕ್ಕೆ ಸಾಹಿತ್ಯ ಭಾಷೆಯನ್ನು ಕಸಿ ಮಾಡಿದರು, ಯಾವುದೇ ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟವರು. ಕನ್ನಡ ಪತ್ರಿಕೋದ್ಯಮದಲ್ಲಿ ಅವರು ಬೆಳೆದು ನಮ್ಮಂತವರ ಮೇಲೆ ಹೆಚ್ಚು ಪ್ರಭಾವ ಬೀರಿದರು, ಅವರಲ್ಲಿದ್ದ ಪತ್ರಿಕೋದ್ಯಮದ ಬದ್ಧತೆ ನಮ್ಮಂತಹವರ ಮೇಲೆ ಪ್ರಭಾವ ಬೀರಿತು ಎಂದರು.

ಇಂದಿನ ಪತ್ರಿಕೋದ್ಯಮದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದರು ಪತ್ರಿಕೋದ್ಯಮಕ್ಕೆ ಬರಬಹುದಾಗಿದೆ. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಬಹಳ ಸುರಕ್ಷಿತವಾಗಿತ್ತು. ಅದಕ್ಕೆ ಕಾರಣ ದಿ.ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದುದು, ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕೇವಲ ಎರಡೇ ಪ್ರಕರಣಗಳು ಜರುಗಿದವು, ಉಳಿದಂತೆ ರಾಜ್ಯ ಬಹಳ ಸುರಕ್ಷಿತವಾಗಿತ್ತು ಎಂದರು.

ಪ್ರಸ್ತುತ ದಿನಗಳಲ್ಲಿ ಸೋಶಿಯಲ್ ಮೀಡಿಯಾ, ಯೂಟ್ಯೂಬರ್‌ಗಳು ಒಬ್ಬ ಚಿತ್ರ ನಟಿಯನ್ನು ನಿನ್ನ ತೂಕವೆಷ್ಟು ಎಂದು ಪ್ರಶ್ನಿಸುತ್ತಾರೆ, ಇದು ಪತ್ರಿಕೋದ್ಯಮದ ಭಾಷೆಯಾ? ಸೋಶಿಯಲ್ ಮೀಡಿಯಾಗೆ ವಿವ್ಸ್, ಫಾಲೋವರ್ಸ್‌ಗಳು ಹೆಚ್ಚಾಗಬೇಕು ಅದಕ್ಕಾಗಿ ಇಂತಹ ಸನ್ನಿವೇಶಗಳು ಎದುರಾಗುತ್ತಿದೆ.

” ‘ಆಂದೋಲನ’ ಕಚೇರಿಯಲ್ಲಿ ಒಂದು ರೀತಿಯ ಸಮ್ಮಿಶ್ರ ಭಾವ. ಒಂದು ಕಡೆ ೮ ವರ್ಷಗಳ ಹಿಂದೆ (೨೦೧೭ರ ನ.೨೩) ಅಗಲಿದ ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ಬಿಟ್ಟು ಹೋದ ನಿರ್ವಾತದ ನೋವು. ಇನ್ನೊಂದು ಕಡೆ ಅವರ ಸ್ಮರಣೆಯ ಸಲುವಾಗಿ ನಡೆದ ಆನ್‌ಲೈನ್ ಸಂವಾದ ಹುಟ್ಟು ಹಾಕಿದ ಹಲವು ಪ್ರಶ್ನೆಗಳು ಮತ್ತು ಕೆಲವು ಉತ್ತರಗಳ ಮೆಲುಕು. ‘ಮಾಧ್ಯಮ ಎನ್ನುವುದು ಮಾರಾಟದ ಸರಕಲ್ಲ’ ವಿಚಾರ ಕುರಿತು ಶನಿವಾರ ನಡೆದ ಸಂವಾದ ಒಂದು ಕಾಲದಲ್ಲಿ ಸತ್ಯ, ಆದರ್ಶ ಮತ್ತು ಸಾಮಾಜಿಕ ಬದ್ಧತೆಗೆ ಜೀವಂತ ಪ್ರತೀಕದಂತಿದ್ದ ಪತ್ರಿಕೋದ್ಯಮ ಈಗ ಯಾಕೆ ಮಾರಾಟದ ಸರಕಾಗುತ್ತಿದೆ ಎಂಬುದನ್ನು ಪರಾಮರ್ಶಿಸಿದೆ.

-ಸಂಪಾದಕರು 

” ‘ಆಂದೋಲನ’ದಂತಹ ಪತ್ರಿಕೆ ಈಗಲೂ ಮೂಲಗುರಿಯಿಂದ ಆಚೆ ಹೋಗಿಲ್ಲ. ಕೆಲವು ಹೊಂದಾಣಿಕೆ ಗಳು ಅನಿವಾರ್ಯವಾದರೂ ಬದ್ಧತೆ ಬಿಟ್ಟಿಲ್ಲ. ಒತ್ತಡಗಳಿದ್ದರೂ ಪತ್ರಿಕಾ ನೀತಿ ಬಿಟ್ಟಿಲ್ಲ.”

-ಇಂದೂಧರ ಹೊನ್ನಾಪುರ

” ಇಂದಿನ ಮಾಧ್ಯಮಪುಸ್ತಕ, ರಂಗಭೂಮಿ ವಿಮರ್ಶೆಮುಂತಾದವುಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಯುವ ಪೀಳಿಗೆಯ ಪುಸ್ತಕ ವಿಮರ್ಶೆ, ರಂಗಭೂಮಿ ವಿಮರ್ಶೆಗಳೆಲ್ಲಾ ಜಾಲತಾಣಕ್ಕೆ ಸೇರಿಸಿಕೊಂಡಿವೆ. -ಪ್ರೀತಿ ನಾಗರಾಜ್ ಭವಿಷ್ಯದಲ್ಲಿ ಸೋಶಿಯಲ್ ಮೀಡಿಯಾದ ಪರಿಣಾಮ ಉಳಿದ ಮಾಧ್ಯಮಗಳ ಮೇಲೆ ಬೀರಲಿದ್ದು, ಆದ್ದರಿಂದ ದೃಶ್ಯ ಹಾಗೂ ಮುದ್ರಣಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾದ ಅರಿವು ಇರಬೇಕು.”

-ಜಗದೀಶ್ ಕೊಪ್ಪ 

” ಇಂದಿನ ಮಾಧ್ಯಮಪುಸ್ತಕ, ರಂಗ ಭೂಮಿ ವಿಮರ್ಶೆ ಮುಂತಾದವುಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಯುವ ಪೀಳಿಗೆಯ ಪುಸ್ತಕ ವಿಮರ್ಶೆ, ರಂಗಭೂಮಿ ವಿಮರ್ಶೆಗಳೆಲ್ಲಾ ಜಾಲತಾಣಕ್ಕೆ ಸೇರಿಸಿಕೊಂಡಿವೆ.”

-ಪ್ರೀತಿ ನಾಗರಾಜ್

Tags:
error: Content is protected !!