Mysore
28
overcast clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಓದುಗರ ಪತ್ರ:  ಈಜುಕೊಳದ ವಾರದ ರಜೆ ಸೋಮವಾರ ಇರಲಿ

ಓದುಗರ ಪತ್ರ

ಮೈಸೂರು ವಿಶ್ವವಿದ್ಯಾನಿಲಯಕ್ಕೊಳಪಟ್ಟಿರುವ ಸರಸ್ವತಿಪುರಂನಲ್ಲಿರುವ ಈಜುಕೊಳಕ್ಕೆ ವಾರದ ರಜಾದಿನ ಇದುವರೆಗೆ ಸೋಮವಾರ ಆಗಿತ್ತು. ಆದರೆ ಇತ್ತೀಚೆಗೆ ಈಜು ಕೊಳಕ್ಕೆ ಭಾನುವಾರ ರಜಾದಿನ ಎಂದು ಘೋಷಿಸಲಾಗಿದೆ.

ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಈಜು ಕಲಿಯಲು ಅನುಕೂಲವಾಗಿತ್ತು. ಆದರೆ ಈ ರೀತಿ ಬದಲಾವಣೆ ಆಗಿರುವುದರಿಂದ ಸ್ವಿಮ್ಮಿಂಗ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ತುಂಬಾ ನಿರಾಸೆಯಾಗಿದೆ. ಶಾಲಾ ಮಕ್ಕಳ ಅನುಕೂಲಕ್ಕಾಗಿ ಭಾನುವಾರ ಈಜುಕೊಳ ತೆರೆದು, ಹಿಂದಿನಂತೆ ಸೋಮವಾರ ರಜೆ ನೀಡಿದಲ್ಲಿ ತುಂಬಾ ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕ್ರಮಕೈಗೊಳ್ಳಲಿ.

– ಇಳಾ ಪೂಧ್, ೬ ನೇ ತರಗತಿ, ಮಹಾಬೋಧಿ ಶಾಲೆ, ಸರಸ್ವತಿಪುರಂ, ಮೈಸೂರು

Tags:
error: Content is protected !!