Mysore
32
broken clouds

Social Media

ಮಂಗಳವಾರ, 05 ಮೇ 2026
Light
Dark

ಓದುಗರ ಪತ್ರ: ಚಲುವಾಂಬದಲ್ಲಿ ಐವಿಎಫ್‌  ಕೇಂದ್ರ ಸ್ಥಾಪನೆ ಶ್ಲಾಘನೀಯ

ಓದುಗರ ಪತ್ರ

ಸ್ತ್ರೀರೋಗ, ಮತ್ತು ಮಕ್ಕಳ ಚಿಕಿತ್ಸೆಗೆ ಖ್ಯಾತಿಯಾಗಿರುವ, ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಶೀಘ್ರ ಐವಿಎಫ್ (ಕೃತಕ ಗರ್ಭಧಾರಣೆ ಕೇಂದ್ರ) ಸ್ಥಾಪನೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಿರುವುದು ಶ್ಲಾಘನೀಯ.

ಆಸ್ಪತ್ರೆಯ ಮಕ್ಕಳು ಚಿಕಿತ್ಸೆ ವಿಭಾಗದ ಕಟ್ಟಡದಲ್ಲಿ ಸೇವೆ ಆರಂಭಿಸಲು ಪೂರ್ವ ತಯಾರಿ ನಡೆಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ. ಸುಮಾರವರು ತಿಳಿಸಿದ್ದಾರೆ. ಕೇಂದ್ರದ ಕಾಮಗಾರಿ ಶೀಘದ್ರದಲ್ಲಿ ಪೂರ್ಣಗೊಂಡರೆ ಈ ವರೆಗೂ ಐವಿಎಫ್ಗಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ತುಂಬಾ ಅನುಕೂಲವಾಗಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅನುಕೂಲ ಕಲ್ಪಿಸಲು ಮುಂದಾದ ಸರ್ಕಾರಕ್ಕೆ ಧನ್ಯವಾದಗಳು.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ.

Tags:
error: Content is protected !!