ಗುಂಡ್ಲುಪೇಟೆ : ಕೂಂಬಿಂಗ್ ನಡೆಸುವ ವೇಳೆ ಚಿರತೆಯು ಅರಣ್ಯ ಇಲಾಖೆಯ ಆನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಎಂಬುವವರ ಮೇಲೆ ದಾಳಿ ನಡೆಸಿ ಕತ್ತು, ತಲೆ ಹಾಗೂ ಕೈ ಗಳನ್ನು ಗಾಯಗೊಳಿಸಿರುವ ಘಟನೆ ಶನಿವಾರ ನಡೆದಿದೆ.
ತಾಲ್ಲೂಕಿನ ಯಡವನಹಳ್ಳಿ ಬಳಿ ಚಿರತೆ ಮೇಕೆಯನ್ನು ಒತ್ತೊಯ್ದಿದೆ. ಈ ವೇಳೆ ರೈತರು ಓಂಕಾರ್ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅನೆ ಕಾವಲು ಪಡೆಯ ಸಿಬ್ಬಂದಿಗಳು ಕೂಂಬಿಂಗ್ ನಡೆಯುವ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ: ಸಂಪುಟ ಪುನರ್ ರಚನೆ ವಿಚಾರ: ಈ ಬಾರಿ ಅವಕಾಶ ಸಿಗುತ್ತೆ ಎನ್ನುವ ನಂಬಿಕೆಯಿದೆ ಎಂದ ತನ್ವೀರ್ ಸೇಠ್
ಈ ಸಂದರ್ಭದಲ್ಲಿ ಕೂಗಾಡಿ ಪಟಾಕಿ ಹೊಡೆದು ಕೂಗಿಕೊಂಡಾಗ ಚಿರತೆ ಓಡಿ ಹೊಗಿದೆ, ಘಟನೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಗಾಬರಿಯಾಗಿದ್ದು ಹೊರಗೆ ಓಡಾಡಲು ಭಯಭೀತರಾಗಿದ್ದಾರೆ.
ಇನ್ನೂ ಶುಕ್ರವಾರ ಸಂಜೆ ಕುರುಬರಹುಂಡಿ ಬಳಿ ಗ್ರಾಮದ ಮಹೇಶ್ ಎಂಬುವವರು ತೊಟದ ಮನೆಯಿಂದ ಹಾಲು ಕರೆದುಕೊಂಡು ಗ್ರಾಮದ ಕಡೆ ಬರುವಾಗ ಹುಲಿ ರಸ್ತೆಯಲ್ಲಿ ನಿಂತಿದನ್ನು ನೋಡಿದ್ದಾರೆ. ಆವಾಗ ಮಹೇಶ್ ಮತ್ತೆ ತೊಟದ ಮನೆ ಕಡೆ ಒಡಿ ಹೊಗಿದ್ದಾರೆ. ಈ ಭಾಗದಲ್ಲಿ ಹುಲಿ, ಚಿರತೆ ಸಂಖ್ಯೆ ಹೆಚ್ಚಿದ್ದು ಅರಣ್ಯ ಇಲಾಖೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.





