Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನಾಗರಹೊಳೆ ಅರಣ್ಯಕ್ಕೆ ಕಂಟಕವಾಗಿರುವ ಸೆನ್ನಾ ಸಸ್ಯಪ್ರಭೇದ

ಹುಣಸೂರು: ರಾಷ್ಟ್ರೀಯ ಹುಲಿ ಸಂರಕ್ಷಿತ ಅಭಯಾರಣ್ಯ ನಾಗರಹೊಳೆ ನಿತ್ಯಹರಿದ್ವರ್ಣದಿಂದ ಕೂಡಿದ್ದರೂ ವರ್ಷದ ಎಲ್ಲ ಕಾಲದಲ್ಲೂ ಹಸಿರಾಗಿರುವ ಸೆನ್ನಾ ಸಸ್ಯ ಪ್ರಭೇದ ಅರಣ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದು, ವನ್ಯಜೀವಿಗಳ ಆಹಾರ ಸರಪಳಿಗೆ ಕಂಟಕವಾಗುವ ಆತಂಕ ಎದುರಾಗಿದೆ.

೮೪೮ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ನಾಗರಹೊಳೆ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಜೈವಿಕ ವೈವಿಧ್ಯ ಕೇಂದ್ರವಾಗಿದೆ. ಹಲವು ಪ್ರಾಣಿ, ಪಕ್ಷಿ ಮತ್ತು ಸಸ್ಯಗಳಿಗೆ ಆಶ್ರಯವಾಗಿರುವ ಅಭಯಾರಣ್ಯದಲ್ಲಿ ಸೆನ್ನಾ ಸಸ್ಯ ವರ್ಗ ವ್ಯಾಪಕವಾಗಿ ಹರಡಿ ಪ್ರಾಣಿಗಳಿಗೆ ಆಹಾರದ ಕೊರತೆ ಸೃಷ್ಟಿಸಿದ್ದು, ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.

ಸೆನ್ನಾ ಲ್ಯಾಟಿನ್ ಅಮೆರಿಕದ ಗೃಹ ಆಲಂಕಾರಿಕ ಹಳದಿ ಹೂವು. ಇದು ಕೇರಳದ ವಯನಾಡು ಮೂಲಕ ನಾಗರಹೊಳೆಗೂ ವ್ಯಾಪಿಸಿದೆ. ಈ ಸಸ್ಯದ ಬೀಜ ಪ್ರಸರಣ ಗಾಳಿಯಲ್ಲಿ ಆಗು ವುದರಿಂದ ನಿಯಂತ್ರಣ ಕಷ್ಟವಾಗುತ್ತಿದ್ದು, ವಾರ್ಷಿಕವಾಗಿ ಪ್ರತಿ ಗಿಡ ೬ ಸಾವಿರ ಬೀಜ ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿ ರುತ್ತದೆ. ತೇವಾಂಶ ಇರುವ ಸ್ಥಳದಲ್ಲಿ ವೇಗವಾಗಿ ಬೆಳೆಯುತ್ತದೆ ಎಂದು ನಾಗರಹೊಳೆ ಹುಲಿ ಯೋಜನೆಯ ಎಸಿಎಫ್ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

ವೈಜ್ಞಾನಿಕ ಅಧ್ಯಯನದಂತೆ ಸೆನ್ನಾ ಮರದಿಂದ ಉದುರುವ ಎಲೆ ಗೊಬ್ಬರವಾಗುವುದಿಲ್ಲ. ಎಲೆ ಕರಗಿದ ಬಳಿಕ ರಾಸಾಯನಿಕ ಬದಲಾವಣೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಅಲ್ಲಿ ಯಾವುದೇ ಬೆಳೆ ಬೆಳೆಯಲು ಆಗದು. ಇದರಿಂದ ಆಹಾರ ಸರಪಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಲಂಟಾನ ಮತ್ತು ಸೆನ್ನಾ ಹುಲಿ ಸಂರಕ್ಷಿತ ಪ್ರದೇಶ ನಾಗರಹೊಳೆ, ಬಂಡೀಪುರಕ್ಕೆ ದೊಡ್ಡ ಪಿಡುಗಾಗಿವೆ. ಈವರೆಗೆ ೧,೩೦೦ ರಿಂದ ೧,೬೦೨ ಹೆಕ್ಟೇರ್ ಪ್ರದೇಶದಲ್ಲಿನ ಲಂಟಾನ ತೆರವುಗೊಳಿಸಿ, ಹುಲ್ಲು ಮತ್ತು ಬಿದಿರು ಬೆಳೆಸುವ ಪ್ರಕ್ರಿಯೆ ನಡೆದಿದೆ. ನಾಗರಹೊಳೆಯ ೮ ವಲಯಗಳಲ್ಲಿ ವಾರ್ಷಿಕವಾಗಿ ೫ ಹೆಕ್ಟೇರ್ ಪ್ರದೇಶದ ಲಂಟಾನ ತೆರವಿಗೆ ಇಲಾಖೆ ಮುಂದಾಗಿದೆ. ಈ ನಡುವೆ ಅಪಾಯಕಾರಿ ಸೆನ್ನಾ ಸಸ್ಯ ಪ್ರಭೇದ ದೊಡ್ಡ ಸವಾಲಾಗಿದೆ ಎಂದು ನಾಗರಹೊಳೆ ಹುಲಿ ಯೋಜ ನೆಯ ನಿರ್ದೇಶಕಿ ಸೀಮಾ ತಿಳಿಸಿದ್ದಾರೆ.

Tags:
error: Content is protected !!